ನಾಲ್ವರು ಕನ್ನಡಿಗರ ದುರ್ಮರಣ, ಇಬ್ಬರು ಬೆಂಗಳೂರಿನ ಪ್ರವಾಸಿಗರು ಕಣ್ಮರೆ

ದೇವರ ನಾಡೆಂದು ಕರೆಸಿಕೊಳ್ಳುವ ವಯನಾಡಿನಲ್ಲಿ ಜಲಪ್ರಳಯ ಗುಡ್ಡ ಕುಸಿತ ಉಂಟಾಗಿದ್ದು, ಊರಿಗೆ ಊರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಭಾರಿ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು,ಸಾವಿನ ಸಂಖ್ಯೆ 143 ಕ್ಕೆ ಏರಿಕೆಯಾಗಿದೆ. ರಾತ್ರೋರಾತ್ರಿ ಉಂಟಾದ ಜಲಪ್ರಳಯದಲ್ಲಿ, ಶೇ.50ರಷ್ಟು ಜನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಡೀ ಊರೇ ಜಲ ಸಮಾಧಿಯಾಗಿದೆ. ವಯನಾಡು ಜಿಲ್ಲೆಯ ಮೇಪ್ಪಾಡಿ ಪಟ್ಟಣದ ಮುಂಡೈಕೆ ಬೆಟ್ಟದ ತಪ್ಪಲಿನಲ್ಲಿ ಚೂರಲ್ ಮಲೈ ಎಂಬ ಗ್ರಾಮದಲ್ಲಿ 500 ಮನೆಗಳಿದ್ದು, ಜಲಪ್ರಳಯದಿಂದಾಗಿ 300 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಈ ಘಟನೆಯಲ್ಲಿ, ನಾಲ್ವರು ಕನ್ನಡಿಗರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.











