ಕವನ
ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ

ದೀಪಾವಳಿಯಲ್ಲಿ ಸಡಗರವೋ ಸಡಗರ
ವೈಮನಸ್ಸು ಹೋಗಿ ಬರುವುದು ಮಮಕಾರ
ಮನೆಯಲ್ಲಿ ಬೆಳೆಕೆಂಬ ದೀಪದ ಅಲಂಕಾರ
ದುರಾಗುವುದು ನಮ್ಮೊಳಗಿನ ಅಹಂಕಾರ
ನಿರಂತರವಾಗಿ ಮಳೆ ಬೀಳುವ ಕರಾವಳಿ
ಅಮ್ಮನಿಗೆ ಕೊಡುವೇ ನಾನು ಬಳುವಳಿ
ಮಾಡೋಣ ರೈತರ ಏಳಿಗೆ ಬಗ್ಗೆ ಚಳುವಳಿ
ದೀಪದ ಮಹಿಮೆ ಸಾರುವಂತ ದೀಪಾವಳಿ
ಪಾಂಡವರ ಬಗ್ಗೆ ಜೀವನ ಸಾರ ತಿಳಿಸುವುದು
ಜೂಜಾಟದಿಂದ ಬದುಕೆಲ್ಲಾ ಹಾಳಾಗುವುದು
ಸಜ್ಜನರ ಸಹವಾಸದಿಂದ ಗೌರವ ಬರುವುದು
ನರನೆಂದ್ಮೇಲೆ ಸಾಧಿಸಿ ಮುಕ್ತಿ ಹೊಂದುವುದು
ಎಲ್ಲರ ಮನ ಮನೆಯ ದೀಪ ಹಚ್ಚೋಣ
ಬಡ ಅನಾಥರ ಬಾಳಿಗೆ ಬೆಳಕಾಗೋಣ
ನಾವೆಲ್ಲ ಬಾಳಲ್ಲಿ ದುರ್ಚಟ ತೇಜಿಸೋಣ
ಖುಷಿ ಖುಷಿಯಾಗಿ ದೀಪಾವಳಿ ಆಚರಿಸೋಣ



















































