
ಕಾರ್ಕಳದ ಉದ್ಯಮಿ ದಿ. ಜಿ ವಿಪುಲ್ ಕಿಣಿಯವರು ಸದಾ ಕ್ರಿಯಾಶೀಲರಾಗಿ ಸಾರ್ವಜಿನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಇತ್ತೀಚಿಗೆ ದೈವಾಧೀನರಾಗಿ ತನ್ನ ಅಪಾರ ಬಂಧು ಮಿತ್ರರನ್ನು ಅಗಲಿರುವರು. ಇದೀಗ ಅವರ ಹೆಸರು ಶಾಶ್ವತವಾಗಿ ಉಳಿಯುವ ಪ್ರಯುಕ್ತ ಜೇಸಿ ಆಂಗ್ಲ ಮಾಧ್ಯಮ ಶಾಲೆಯ “class of 92” ಬ್ಯಾಚಿನ ವಿದ್ಯಾರ್ಥಿಗಳು ಚೇತನಾ ವಿಶೇಷ ಶಾಲೆ ಕಾರ್ಕಳ ಇಲ್ಲಿ ರೂ. 1,00,001/-ನ್ನು ವಿದ್ಯಾರ್ಥಿಗಳ ಅನ್ನದಾನ ನಿಧಿಗೆ ದೇಣಿಗೆ ನೀಡಿದ್ದು ಈ ಮೊತ್ತದಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ಅನ್ನದಾನವನ್ನು ಪ್ರತೀ ವರ್ಷ ಜೂನ್ ತಿಂಗಳ 28ನೇ ತಾರೀಖಿನಂದು ವಿದ್ಯಾರ್ಥಿಗಳಿಗೆ ನೀಡಿವಂತೆ ಶಾಶ್ವತ ಅನ್ನದಾನ ನಿಧಿಯನ್ನು ಸ್ಥಾಪಿಸಲಾಯಿತು.
ಜೇಸಿ ಆಂಗ್ಲ ಮಾಧ್ಯಮ ಶಾಲೆಯ “class of 92” ಬ್ಯಾಚಿನ ವಿದ್ಯಾರ್ಥಿಗಳಾದ ಯೋಗೀಶ್ ನಾಯಕ್ ಟಿ, ಸ್ಮಿತಾ ಶೆಣೈ, ಗುರುಪ್ರಸಾದ್ ಶೆಟ್ಟಿಗಾರ್, ನವೀನ್ ಡಿಸೋಜಾ, ಗೋಕುಲ್‌ದಾಸ್ ಡಿ ಶೆಟ್ಟಿ ಮತ್ತು ಶಶಿಧರ್ ಹೆಗ್ಡೆ ಈ ಮೊತ್ತವನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಜೇಸಿ ಆಂಗ್ಲ ಮಾಧ್ಯಮ ಶಾಲೆಯ “class of 92” ಬ್ಯಾಚಿನ ವಿದ್ಯಾರ್ಥಿಗಳು ತಮ್ಮ ಅಗಲಿದ ಮಿತ್ರನ ಹೆಸರಲ್ಲಿ ನೀಡಿದ ಅನ್ನದಾನ ನಿಧಿಯ ಚೆಕ್ಕನ್ನು ಸ್ವೀಕರಿಸಿ ಶಾಲಾ ಸಂಚಾಲಕರಾದ ರಘುನಾಥ್ ಶೆಟ್ಟಿಯವರು ಸಂಸ್ಥೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು ಹಾಗೂ ಅಗಲಿದ ದಿ. ಜಿ ವಿಪುಲ್ ಕಿಣಿಯವರ ದಿವ್ಯಾತ್ಮಕ್ಕೆ ಸದಾ ಚಿರಶಾಂತಿ ಸಿಗಲೀ ಎಂದು ಸಾಮೂಹಿಕವಾಗಿ
ಪ್ರಾರ್ಥನೆಯನ್ನು ಸಲ್ಲಿಸಿದರು.








