21.1 C
Udupi
Tuesday, February 17, 2026
spot_img
spot_img
HomeBlog‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’ ಎಂದು ಜೈಲಿನಲ್ಲಿ ಕಣ್ಣೀರು ಹಾಕಿದ ಪವಿತ್ರಾ ಗೌಡ

‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’ ಎಂದು ಜೈಲಿನಲ್ಲಿ ಕಣ್ಣೀರು ಹಾಕಿದ ಪವಿತ್ರಾ ಗೌಡ

spot_imgspot_img

ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಅರೆಸ್ಟ್ ಆಗಿದ್ದಾರೆ. ಕೆಲವು ದಿನಗಳ ಬಳಿಕ ಅವರನ್ನು ಕೋರ್ಟ್ ಎದುರು ಪೊಲೀಸರು ಹಾಜರುಪಡಿಸಿ ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ನೀಡುವಂತೆ ಅವರು ಕೇಳಬಹುದು. ಈ ಮಧ್ಯೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಕಿ ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿ 27ರಿಂದ ರೇಣುಕಾ ಸ್ವಾಮಿ ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿದ್ದು ಇತ್ತೀಚೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸೋದು ಹೆಚ್ಚಿತ್ತು. ಅವರು ಗುಪ್ತಾಂಗದ ಫೋಟೋಗಳನ್ನು ಕೂಡ ಪವಿತ್ರಾಗೆ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಪವಿತ್ರಾ ರೋಸಿ ಹೋಗಿದ್ದರು. ಈ ವಿಚಾರ ದರ್ಶನ್ ಕಿವಿಗೆ ಬಿದ್ದಿತ್ತು. ಆ ಬಳಿಕ ದರ್ಶನ್ ಸಿಟ್ಟಾಗಿ ರೇಣುಕಾ ಸ್ವಾಮಿಯನ್ನು ದರ್ಶನ್ ಅವರೇ ಬೆಂಗಳೂರಿಗೆ ಕರೆಸಿ ಆ ಬಳಿಕ ಅವರ ಮೇಲೆ ಹಲ್ಲೆ ಮಾಡಿ ದರ್ಶನ್ ಗ್ಯಾಂಗ್ನಿಂದಲೇ ರೇಣುಕಾ ಸ್ವಾಮಿ ಕೊಲೆಯಾಗಿದೆ ಎನ್ನಲಾಗಿದೆ.

ಇದೀಗ ಜೈಲಿನಲ್ಲಿ ಪವಿತ್ರಾ ಗೌಡ ಅವರು ಈ ಘಟನೆ ಬಗ್ಗೆ ಮರುಗುತ್ತಿದ್ದು ‘ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್ಗೆ ಗೊತ್ತಾಗಬಾರದಿತ್ತು. ದರ್ಶನ್ ಕಿವಿಗೆ ಮೆಸೆಜ್ ವಿಚಾರ ಬೀಳಬಾರದಿತ್ತು. ನಾನೇ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ದರ್ಶನ್ಗೆ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು. ಈ ವಿಚಾರ ನನ್ನಲ್ಲೇ ಇದ್ದಿದ್ದರೆ ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಯಾರು ಹೋಗುತ್ತಾ ಇರಲಿಲ್ಲ. ಆರೋಪಿಗಳಾಗಿ ನಾವು ಜೈಲು ಸೇರುತ್ತಿರಲಿಲ್ಲ’ ಎಂದು ಪವಿತ್ರಾ ಗೌಡ ಪಶ್ಚಾತಾಪ ಪಡುತ್ತಿದ್ದಾರೆ ಎಂದು ವರದಿಯಾಗಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page