29.5 C
Udupi
Monday, December 22, 2025
spot_img
spot_img
HomeBlogದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಹಿಂಸಿಸುತ್ತಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಹಿಂಸಿಸುತ್ತಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ..!

ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ ,ಜಿಲ್ಲಾಧಿಕಾರಿ ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಮನವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದ್ದು, ನಾಗರಿಕರ ಖಾಸಗಿ ಜೀವನ ಮತ್ತು ವ್ಯಕ್ತಿತ್ವದ ಗೌರವವನ್ನು ಘನತೆಯನ್ನು ಹಾಳು ಮಾಡುತ್ತಿದೆ. ಪೊಲೀಸರು ಕಳೆದ ಒಂದು ವಾರದಿಂದ ಕೋಮುಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂದೂ ಕಾರ್ಯಕರ್ತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆಯ ನೆಪದಲ್ಲಿ ಸ್ಥಳಿಯ ಪೊಲೀಸ್ ಠಾಣೆಯಿಂದ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ, ನೋಟಿಸು ನೀಡದೆ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಪೋಟೊ ತೆಗೆಯುವುದು, ಅವರ ಮನೆಯ ಜಿಪಿಎಸ್ ಲೊಕೇಶನ್ ಸಂಗ್ರಹ ಮಾಡುವುದು. ಕಳೆದ ಅನೇಕ ದಶಕಗಳಿಂದ ಯಾವುದೇ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗದ ಕೂಲಿ ಕಾರ್ಮಿಕರು, ವಯಸ್ಕರನ್ನು ಬಿಡದೇ ಮಧ್ಯರಾತ್ರಿ ಪೋನ್ ಮಾಡಿ, ಮನೆಗೆ ಹೋಗಿ ಕಿರುಕುಳ ನೀಡಲಾಗಿದೆ.

ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಸಹ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿ ಬಂಧನ ಮಾಡಿ, ಅವರಿಗೆ ಕಿರುಕುಳ ನೀಡಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಪೋಲಿಸರು ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಭಾರತ ಸಂವಿಧಾನದ ಕಲಂ 14, 19 ಮತ್ತು 21 ರ ಉಲ್ಲಂಘನೆಯಾಗಿದೆ. ಅದಲ್ಲದೇ ಭಾರತೀಯ ನ್ಯಾಯ ಸಂಹಿತೆ ಕಲಂ 105, 107, 182, 352, 128 ಪ್ರಕಾರ ಇದು ಗಂಭೀರ ಅಪರಾಧವಾಗಿದೆ. ಇದು ಭಾರತದ ಸಂವಿಧಾನವು ನೀಡಿದ ನಾಗರಿಕರ ಖಾಸಗಿ ಹಕ್ಕು ಮತ್ತು ಜೀವನದ ಹಕ್ಕನ್ನು ಕಸಿದು, ನಮ್ಮಲ್ಲಿ ಅಸುರಕ್ಷಿತ ಭಾವನೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ.

ಇದರ ವಿರುದ್ಧ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು
ಪೊಲೀಸ್ ಮಹಾನಿರೀಕ್ಷಕರಾದ ಅಮಿತ್ ಸಿಂಗ್ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾದ ಆನಂದ್ ಇವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

ಮನವಿಯಲ್ಲಿ ಸಲ್ಲಿಸಲಾದ ಬೇಡಿಕೆಗಳು:
೧. ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾನವ ಹಕ್ಕಗಳು ಉಲ್ಲಂಘನೆ ಮಾಡಿದ ವಿಷಯದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಮಾಡಬೇಕು.
೨. ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಆದೇಶವನ್ನು ನೀಡಬೇಕು.
೩. ಪೊಲೀಸರಿಂದ ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಪರಿಹಾರವನ್ನು ನೀಡಬೇಕು ಮತ್ತು ಸಂಬಂಧಿಸಿದವರಿಂದ ಲಿಖಿತ ಕ್ಷಮಾಪಣೆ ಪಡೆಯಬೇಕು.
೪. ಪೊಲೀಸರು ಈ ಪ್ರಕರಣದಲ್ಲಿ ಸ್ವಯಂಪ್ರೇರಿತರಾಗಿ ಗಮನ ಹರಿಸಿ, ಸೂಕ್ತ ತನಿಖೆ, ಕ್ರಮ ಜರುಗಿಸಿ ಪ್ರಕರಣದ ಮೇಲೆ ನಿಗಾ ಇಡಬೇಕು ಮತ್ತು ಮಾನಸಿಕ ಕಿರುಕುಳ ನೀಡುವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಪೂಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಪೀಡಿತರಿಗೆ ನ್ಯಾಯ ಒದಗಿಸಿಕೊಡಬೇಕು.
೬. ಜಿಲ್ಲೆಯಲ್ಲಿ ಹಿಂದೂ ನಾಯಕರಿಗೆ ಬಂದಿರುವ ಜೀವ ಬೆದರಿಕೆಗಳ ಬಗ್ಗೆ ತಕ್ಷಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂ ನಾಯಕರಿಗೆ ರಕ್ಷಣೆ ನೀಡಬೇಕು.
೭. ಅಬ್ದುಲ್ ರೆಹಮಾನ್ ಶವಯಾತ್ರೆ ವೇಳೆ ನಡೆದ ಬಲವಂತ, ಮಾಧ್ಯಮದ ಮೇಲಿನ ಹಲ್ಲೆ, ಕಲ್ಲು ತೂರಾಟದ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
೮. ಪಿಎಫ್‌ಐ ಸಂಘಟನೆಯ ಸದಸ್ಯರು ಅನ್ಯ ಸಂಘಟನೆಯ ಮೂಲಕ ಸಕ್ರೀಯವಾಗಿದ್ದು, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಅವರ ಕೈವಾಡ ಇರುವ ಶಂಕೆಯಿದ್ದು, ಸುಹಾಸ್ ಶೆಟ್ಟಿ ಪ್ರಕರಣವನ್ನು ಓರ್ವ ಐಪಿಎಸ್ ಅಧಿಕಾರಿ ನೆೇತೃತ್ವದಲ್ಲಿ ತನಿಖೆಯನ್ನು ಮಾಡಿ, ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ, ಕುಮ್ಮಕ್ಕು ನೀಡಿದ, ಸಹಕರಿಸಿದ ಎಲ್ಲರ ಬಂಧನ ಆಗಬೇಕು ಮತ್ತು ಪಿಎಪ್‌ಐ ಮೇಲೆ ನಿಷೇಧವನ್ನು ತೀವ್ರವಾಗಿ ಜಾರಿಗೆ ತಂದು, ಸಕ್ರಿಯ ಸದಸ್ಯರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
೯.ಕೋಮುಹಿಂಸೆಯನ್ನು ಪ್ರಚೋದನೆ ಮಾಡುವ ಎಸ್‌ಡಿಪಿಐ ಮುಖಂಡರಾದ ರಿಯಾಜ್ ಫರಂಗಿಪೇಟೆ, ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಬು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಮುಂತಾದವರ ಮೇಲೆ ದ್ವೇಷ ಭಾಷಣದ ಪ್ರಕರಣವನ್ನು ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು :

  1. ವಿದ್ಯಾಸರಸ್ವತಿ ಸ್ವಾಮೀಜಿ, ಅಧ್ಯಕ್ಷರು, ಭಾರತ ಸಂತ ಸಮಿತಿ, ಕರ್ನಾಟಕ ಪ್ರಾಂತ.
  2. . ಭಾಸ್ಕರ್ ಚಂದ್ರ ಶೆಟ್ಟಿ, ಗೌರವಾಧ್ಯಕ್ಷರು, ಹಿಂದೂ ಯುವ ಸೇನೆ.
  3. . ರಾಧಾಕೃಷ್ಣ ಅಡ್ಯಂತಾಯ, ಸಾಮಾಜಿಕ ಕಾರ್ಯಕರ್ತರು
  4. . ಚಂದ್ರ ಮೊಗವೀರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕರ್ನಾಟಕ.
  5. . ಪ್ರಶಾಂತ್, ಸದಸ್ಯರು, ದಕ್ಷಿಣ ಪ್ರಾಂತ ಕಾರ್ಯಕಾರಿಣಿ, ಹಿಂದೂ ಜಾಗರಣ ವೇದಿಕೆ.
  6. . ಆನಂದ್ ಶೆಟ್ಟಿ ಅಡ್ಯಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಶ್ರೀರಾಮಸೇನೆ.
  7. ಗಿರೀಶ್ ಕೊಟ್ಟಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಹಸಿರು ಜನಜಾಗೃತಿ ಸಂಘ.
  8. . ಲೋಕೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ, ರಾಜ ಕೇಸರಿ ಟ್ರಸ್ಟ್, ದಕ್ಷಿಣ ಕನ್ನಡ.
  9. . ಜನಾರ್ಧನ ಅರ್ಕುಲ, ಹಿಂದೂ ಮುಖಂಡರು.
  10. . ಕೃಷ್ಣ ಉಪಾಧ್ಯಾಯ, ಹಿಂದೂ ಮುಖಂಡರು
  11. . ಅಮೃತೇಶ, ವಕೀಲರು, ಉಚ್ಚ ನ್ಯಾಯಾಲಯ.
  12. . ಈಶ್ವರ ಕೊಟ್ಟಾರಿ, ವಕೀಲರು, ಮಂಗಳೂರು.
  13. . ತೀರ್ಥೇಶ, ವಕೀಲರು, ಮಂಗಳೂರು. ಕಿರಣ್ ರೈ, ಹಿಂದೂ ಯುವ ಸೇನೆ.. ತಿಲಕ್, ಯುವ ಬ್ರಿಗೇಡ್.
  14. ಗಣರಾಜ ಭಟ್ ಕೆದಿಲಾಯ, ಸಾಮಾಜಿಕ ಕಾರ್ಯಕರ್ತರು
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page