
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದ ಹಿನ್ನೆಲೆ ಕೋಟಿ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು ಈ ನೀರಿನ ಗುಣಮಟ್ಟವು ಸ್ನಾನಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಮಲಿನವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿ ಮಾಡಿದ ಬೆನ್ನಲ್ಲೇ ಯುಪಿ ಸರ್ಕಾರ ಇದನ್ನು ಅಲ್ಲಗೆಳೆದು ತ್ರಿವೇಣಿ ಸಂಗಮದ ನೀರು ಕುಡಿಯಲು ಯೋಗ್ಯ ಎಂದು ಸಿಎಂ ಯೋಗಿ ಹೇಳಿದ್ದಾರೆ.
56 ಕೋಟಿ ಭಕ್ತರು ಈಗಾಗಲೇ ಕುಂಭಮೇಳದಲ್ಲಿ ಮಿಂದೆದಿದ್ದು ಯಾರಿಗೂ ಏನು ಆಗಿಲ್ಲ. ನಾವು ಇಂತಹ ಆಧಾರರಹಿತ ಆರೋಪ ಒಪ್ಪಲ್ಲ. ಸನಾತನ ಧರ್ಮದ ಬಗ್ಗೆ, ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋದನ್ನು ಸಹಿಸಲ್ಲ. ಅವರು 56 ಕೋಟಿ ಭಕ್ತರ ನಂಬಿಕೆಗಳ ಜೊತೆ ಆಟ ಆಡ್ತಿದ್ದಾರೆ ಎಂದು ಅಸೆಂಬ್ಲಿಯಲ್ಲಿ ಸಿಎಂ ಕಿಡಿಕಾರಿದ್ದಾರೆ.