32.7 C
Udupi
Friday, March 14, 2025
spot_img
spot_img
HomeBlogತೆಳ್ಳಾರು: ಮನೆ-ಮನೆ ಭಜನಾ ತಿರುಗಾಟ ಇಂದು ಸಂಪನ್ನ, ನಾಳೆ ಮಧ್ಯಾಹ್ನ ಶ್ರೀ ಜಲದುರ್ಗಾ ದೇವಿಯ ಸನ್ನಿಧಿಯಲ್ಲಿ...

ತೆಳ್ಳಾರು: ಮನೆ-ಮನೆ ಭಜನಾ ತಿರುಗಾಟ ಇಂದು ಸಂಪನ್ನ, ನಾಳೆ ಮಧ್ಯಾಹ್ನ ಶ್ರೀ ಜಲದುರ್ಗಾ ದೇವಿಯ ಸನ್ನಿಧಿಯಲ್ಲಿ ಭಜನಾ ಮಂಗಲ, ಸಾರ್ವಜನಿಕ ಅನ್ನಸಂತರ್ಪಣೆ

ತೆಳ್ಳಾರು: ಕಳೆದ ಹಲವಾರು ವರ್ಷಗಳಿಂದ ಶ್ರೀ ಜಲದುರ್ಗಾ ಭಜನಾ ಮಂಡಳಿಯ ನೇತೃತ್ವದಲ್ಲಿ ಗ್ರಾಮ ಸುಭೀಕ್ಷೆಗಾಗಿ, ಗ್ರಾಮಸ್ಥರ ಒಳಿತಿಗಾಗಿ ನಡೆಸುತ್ತಾ ಬಂದಿರುವ ಮನೆ ಮನೆ ಭಜನಾ ಕಾರ್ಯಕ್ರಮವು ಈ ವರ್ಷವೂ ಮುಂದುವರಿಸಿಕೊಂಡು ಕಳೆದ ತಿಂಗಳ 26- 02- 2025 ರಿಂದ ಆರಂಭಗೊಂಡಿದ್ದ ಈ ಸಾಲಿನ ಮನೆ ಮನೆ ಭಜನೆಗೆ ಇಂದು ಕೊನೆಯದಿನ. ಕಳೆದ 15 ದಿನಗಳಿಂದ ಪ್ರತೀ ದಿನ ಸಂಜೆ ಗಂಟೆ 06-15 ರಿಂದ ರಾತ್ರಿ ಗಂಟೆ 10-45 ರವರೆಗೆ ಊರಿನ ಸ್ವಬಾಂಧವರ ಪ್ರತೀ ಮನೆ ಮನೆಗಳಿಗೂ ಭಜಕ ವೃಂದದ ಸದಸ್ಯರು ದೇವರ ಮಂಟಪದೊಂದಿಗೆ ತೆರಳಿ, ಭಜನೆ ಹಾಡಿ ಮನೆಯವರಿಂದ ದೇವರಿಗೆ ಆರತಿಯೆತ್ತಿಸಿ ಗಂಧ-ಪ್ರಸಾದ ವಿತರಿಸುತ್ತಿದ್ದರು. ಪುರುಷರು- ಮಹಿಳೆಯರು- ಮಕ್ಕಳು ಸೇರಿಕೊಂಡು ಮಂಡಳಿಯ ಸುಮಾರು 40 ಜನ ಸದಸ್ಯರು ಈ ಪುಣ್ಯ ಕಾರ್ಯದಲ್ಲಿ ಪ್ರತೀ ದಿನ ಭಾಗವಹಿಸುತ್ತಿದ್ದರು. ಇವತ್ತು ಭಜನಾ ತಿರುಗಾಟದ ಕೊನೆಯ ದಿನವಾಗಿದ್ದು ನಾಳೆ ಮಧ್ಯಾಹ್ನ ದಿನಾಂಕ 14-03-2025 ಶುಕ್ರವಾರ ಮೀನ ಸಂಕ್ರಮಣ ದಂದು ತೆಳ್ಳಾರು ಶ್ರೀ ಜಲದುರ್ಗಾ ದೇವಿಯ ಸನ್ನಿಧಿಯಲ್ಲಿ ಭಜನಾ ಮಂಗಲ ನಂತರ ಶ್ರೀ ದೇವರಿಗೆ ವಿಶೇಷ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆಯು ಮಂಡಳಿಯ ವತಿಯಿಂದ ನಡೆಯಲಿದೆ. ಇದರೊಂದಿಗೆ ಈ ಸಾಲಿನ ಭಜನಾ ತಿರುಗಾಟ ಸಂಪನ್ನಗೊಳ್ಳಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page