ಬೆಂಗಳೂರು: ತುಳು ಭಾಷೆಯನ್ನು ಕಲಿಯಬೇಕೆಂಬ ಆಸಕ್ತಿ ಇರುವವರಿಗೆ ಇದೀಗ ಗೂಗಲ್ ಸಂತೋಷದ ಸುದ್ದಿಯೊಂದನ್ನು ನೀಡಿದ್ದು ಅದೇನೆಂದರೆ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ.
ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಹೊಸದಾಗಿ 110 ಭಾಷೆಗಳನ್ನು ಸೇರಿಸಿದ್ದು ಭಾರತದ ತುಳು ಸೇರಿದಂತೆ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿಯನ್ನು ಸೇರ್ಪಡೆಗೊಳಿಸಿದೆ.
2006 ರಲ್ಲಿ Google ಅನುವಾದವನ್ನು ಪರಿಚಯಿಸಲಾಗಿದ್ದು ಇಲ್ಲಿಯವರೆಗೆ 133 ಭಾಷೆಗಳನ್ನು ಬೆಂಬಲಿಸುತಿದ್ದು ಆದರೆ ಈಗ ಒಂದೇ ಬಾರಿಗೆ 110 ಭಾಷೆಗಳನ್ನು ಸೇರಿಸಿದ್ದು ಒಟ್ಟು ಈಗ 243 ಭಾಷೆಗಳನ್ನು ಬೆಂಬಲಿಸುತ್ತಿದೆ.
ಹಲವು ಪದಗಳು ನಿಖರವಾಗಿ ತುಳುವಿಗೆ ಅನುವಾದವಾದರೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗೇಬೇಕಿದೆ. ಹಂತ ಹಂತವಾಗಿ ಗೂಗಲ್ ಇದನ್ನು ಸರಿಪಡಿಸುತ್ತಿದ್ದು ಗೂಗಲ್‌ನ ಆರಂಭಿಕ ಪ್ರಯತ್ನಕ್ಕೆ ತುಳು ಭಾಷಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.