31.3 C
Udupi
Friday, February 20, 2026
spot_img
spot_img
HomeBlogತಿರುಮಲ ಲಡ್ಡು ಪ್ರಸಾದ ವಿವಾದ, ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ

ತಿರುಮಲ ಲಡ್ಡು ಪ್ರಸಾದ ವಿವಾದ, ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ

ಜಗನ್ ಮೋಹನ್ ರೆಡ್ಡಿ ಸ್ಪಷ್ಟನೆ

ತಿರುಮಲ ಲಡ್ಡು ಪ್ರಸಾದ ತುಪ್ಪದ ವಿಚಾರದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ, ಇಡೀ ಪ್ರಕರಣದಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಮೇ 13, 2024 ರಂದು ಮತದಾನ ನಡೆಯಿತು. ಚುನಾವಣೆ ಮುಗಿದ ಎರಡೇ ದಿನಕ್ಕೆ, ಅಂದರೆ ಮೇ 15, 2024 ರಂದು ಟೆಂಡರ್ ಓಪನ್ ಮಾಡಲಾಯ್ತು. ಮತದಾನವಾದ ಎರಡು ದಿನಗಳ ನಂತರ, ಎಆರ್ ಡೈರಿಗೆ ತುಪ್ಪ ಪೂರೈಸಲು ಆರ್ಡರ್ ಕೊಡಲಾಯ್ತು. ಜೂನ್ 4, 2024 ರಂದು ಚುನಾವಣಾ ಫಲಿತಾಂಶ ಬಂತು. ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಂಡರು. ಜೂನ್ 12 ರಿಂದ ಎಆರ್ ಡೈರಿ ತುಪ್ಪ ಪೂರೈಕೆ ಶುರು ಮಾಡಿತು. ಜುಲೈ 12, 20, 25 ಮತ್ತು ಜುಲೈ 4 ರಂದು ಪೂರೈಕೆಯಾದ ನಾಲ್ಕು ಟ್ಯಾಂಕರ್‌ಗಳು ಎಲ್ಲಾ ಪರೀಕ್ಷೆಗಳಲ್ಲಿ ಪಾಸ್ ಆದವು. ಆದರೆ, ಜುಲೈ 6 ಮತ್ತು 12 ರಂದು ಎಆರ್ ಡೈರಿ ಕಳುಹಿಸಿದ್ದ ನಾಲ್ಕು ಟ್ಯಾಂಕರ್‌ಗಳು ಪರೀಕ್ಷೆಯಲ್ಲಿ ಫೇಲ್ ಆದವು” ಎಂದು ಜಗನ್ ವಿವರಿಸಿದರು. ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್ (NDDB) ವರದಿಯನ್ನು ಉಲ್ಲೇಖಿಸಿದ ಅವರು, ಅದು ಜುಲೈ 23, 2024 ರಂದು ಬಿಡುಗಡೆಯಾಗಿದೆ ಎಂದು ಹೇಳಿದರು.

ಜುಲೈ 25, 2024 ರಂದು, ಪರೀಕ್ಷೆಯಲ್ಲಿ ಫೇಲ್ ಆದ ಆ ನಾಲ್ಕು ಟ್ಯಾಂಕರ್‌ಗಳನ್ನು ವಾಪಸ್ ಕಳುಹಿಸಲಾಯಿತು. ಜುಲೈ 27, 2024 ರಂದು, ತಿರಸ್ಕರಿಸಿದ ನಾಲ್ಕು ಟ್ಯಾಂಕರ್‌ಗಳನ್ನು ಕಲ್ಲು ಕ್ರಷರ್ ಬಳಿ ರಹಸ್ಯವಾಗಿ ನಿಲ್ಲಿಸಲಾಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್ 2024 ರಲ್ಲಿ, ತಿರಸ್ಕರಿಸಲ್ಪಟ್ಟ ಅದೇ ನಾಲ್ಕು ಟ್ಯಾಂಕರ್‌ಗಳನ್ನು ಮುಂಜಾನೆ 4 ಗಂಟೆಗೆ ರಹಸ್ಯವಾಗಿ ಟಿಟಿಡಿಗೆ ವಾಪಸ್ ತಂದು ಸ್ವೀಕರಿಸಲಾಯಿತು. ಟೆಂಡರ್ ಅಂತಿಮಗೊಳಿಸುವುದರಿಂದ ಹಿಡಿದು, ತುಪ್ಪ ಪೂರೈಕೆ, ಪರೀಕ್ಷೆ, ಟ್ಯಾಂಕರ್‌ಗಳ ತಿರಸ್ಕಾರ ಮತ್ತು ಅದೇ ಟ್ಯಾಂಕರ್‌ಗಳನ್ನು ಟಿಟಿಡಿಗೆ ವಾಪಸ್ ತಂದು ಸ್ವೀಕರಿಸುವವರೆಗೂ, ಈ ಎಲ್ಲದಕ್ಕೂ ವೈಎಸ್‌ಆರ್‌ಸಿಪಿಗೂ ಏನು ಸಂಬಂಧ? ಇದರಲ್ಲಿ ನಮ್ಮ ಪಾತ್ರ ಎಲ್ಲಿದೆ?” ಎಂದು ಜಗನ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page