
ಬೆಂಗಳೂರು: ಕಳೆದ ಎರಡು ಮೂರು ತಿಂಗಳಿನಿಂದ ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಅನ್ನಭಾಗ್ಯದ ಹಣವೂ ಫಲಾನುಭವಿಗಳಿಗೆ ಪಾವತಿ ಆಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರತಿಕ್ರಿಸಿದ ಸಚಿವ ಕೆ.ಜೆ ಜಾರ್ಜ್ ಅದೇನು ತಿಂಗಳ ಸಂಬಳ ಅಲ್ವಲ್ಲಾ, ತಿಂಗಳು ತಿಂಗಳು ಕೊಡೋದಕ್ಕೆ ಎಂದಿದ್ದಾರೆ.
“ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಈಗ ನಮ್ಮ ಇಲಾಖೆಗೆ ಸಂಬಂಧಿಸಿದಂತೆ 2,60,000 ಗ್ರಾಹಕರಿದ್ದಾರೆ, ತಿಂಗಳು ತಿಂಗಳು ಅವರಿಗೆ ಬಿಲ್ ನಲ್ಲಿ ಈ ಅನುಕೂಲ ಆಗ್ತಿದೆ. ಕೆಲವರಿಗೆ ಗ್ಯಾರಂಟಿ ತಲುಪುವುದು ತಡ ಆಗಿರ್ಬಹುದು, ಆದರೆ ಅದು ಸಚಿಚರಿಗೆ ಗೊತ್ತಾಗ್ಬೇಕು ಅಂತ ಏನಾದ್ರು ಇದೆಯಾ, ಗೊತ್ತಾದ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು. ಇನ್ನು ಇದು ತಿಂಗಳು ತಿಂಗಳು ಸಂಬಳ ಟೈಪ್ ಅಲ್ವಲ್ಲ.. ಮಾರ್ಚ್ ಒಳಗಡೆ ಎಲ್ಲಾ ಗ್ಯಾರಂಟಿ ಕೊಡುತ್ತಾರೆ ಎಂದು ಸ್ವತಃ ಸಿಎಂ ಹೇಳಿದ್ದಾರೆ. ಗ್ಯಾರಂಟಿ ಕೊಡದೇ ಇರುವುದಿಲ್ಲ. ಕೆಲವರಿಗೆ 10- 15 ದಿನ ತಡ ಆಗ್ಬಹುದು ಅಷ್ಟೆ. ಇದಕ್ಕೆ ಬೇರೆ ಬೇರೆ ಕಾರಣ ಇರಬಹುದು” ಎಂದು ಹೇಳಿದ್ದಾರೆ.