ತುಳು ಲಿಪಿ ಅಕ್ಷರಾಭ್ಯಾಸ ವರ್ಗದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಅಭಿನಂದನಾ ಸಮಾರಂಭ

ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ ಆಯೋಜನೆಯ ತುಳು ಲಿಪಿ ಆನ್ಲೈನ್ ಅಕ್ಷರಾಭ್ಯಾಸ ವರ್ಗದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 23/03/2025 ನೇ ಭಾನುವಾರ ಕಾರ್ಕಳ ಜೋಗಿನಕೆರೆ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಕಾರ್ಕಳದ ಯುವ ವಕೀಲರಾದ ಶ್ರೀ ಎಂ. ಕೆ. ವಿಪುಲ್ ತೇಜ್ ರವರು ಭಾರತ ಮಾತೆಯ ಭಾವಚಿತ್ರಕ್ಕೆ ಗೌರವಾರ್ಪಣೆ ಮತ್ತು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು.
ಸಂವಿಧಾನದಡಿಯಲ್ಲಿ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿ, ಶುಭಾಶಯವನ್ನು ವ್ಯಕ್ತಪಡಿಸಿದರು.
ತುಳು ಸಂಘಟಕ ಶ್ರೀ ವಿಶು ಶ್ರೀ ಕೇರ ತುಳು ಭಾಷೆಯ ಆಳ-ಅಗಲ-ವಿಸ್ತಾರವನ್ನು ತಿಳಿಸಿ ಸಾಧಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಕಳ ಬಂಡಿಮಠ ಶ್ರೀ ಕ್ಷೇತ್ರ ಜೋಗಿನಕೆರೆ ಅಯ್ಯಪ್ಪ ಮಂದಿರದ ಗುರುಸ್ವಾಮಿ ಶ್ರೀ ರಾಮಚಂದ್ರ ಆಚಾರ್ಯ ಸಭಾ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಮತ ಆರ್. ಅಂಚನ್ ಅಧ್ಯಕ್ಷರು ಯುವವಾಹಿನಿ ಕಾರ್ಕಳ, ಶ್ರೀಮತಿ ಮಾಲಿನಿ ಶೆಟ್ಟಿ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತ್ ಕಾರ್ಕಳ ಮುಖ್ಯ ಅತಿಥಿಗಳಾಗಿ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಮಿತ್ರಪ್ರಭಾ ಹೆಗ್ಡೆ, ತರುಣ ಭಾರತ ಬಲೆ ತುಳು ಲಿಪಿ ಕಲ್ಪುಗ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ ಸದಸ್ಯರು, ಜೈ ತುಳುನಾಡು ಕಾರ್ಕಳ ಸಂಘಟನೆಯ ಸದಸ್ಯರು, ಜೋಗಿನಕೆರೆ ಅಯ್ಯಪ್ಪ ಮಂದಿರದ ಭಕ್ತರು ಮತ್ತು ತರುಣ ಭಾರತ ಚಾರಿಟೇಬಲ್ ಟ್ರಸ್ಟಿನ ಹಿತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಮಾll ಅಕ್ಷರ್ ಕುಮಾರ್ ಕಾರ್ಕಳ ಪ್ರಾರ್ಥನೆ, ಶ್ರೀಮತಿ ಅಶ್ವಿನಿ ಶೆಟ್ಟಿ ಸ್ವಾಗತ, ಸತೀಶ ಹೆಗ್ಡೆ ಪ್ರಾಸ್ತಾವಿಕ, ಶ್ರೀಮತಿ ಮೋನಿಕ ಭವಿತ್ ಕುಮಾರ್ ತುಳು ಲಿಪಿ ಅಕ್ಷರಾಭ್ಯಾಸ ಸಾಧಕರ ಅಭಿನಂದನೆಯ ನಿರ್ವಹಣೆ, ಉದಯ ಕುಲಾಲ್ ಬಜ್ಪೆ ಧನ್ಯವಾದ ಮತ್ತು ಪ್ರಜ್ವಲ್ ಕುಮಾರ್ ಜೈನ್ ಮುಂಡ್ಲಿ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಯಿತು.