ಕಾರ್ಕಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ, “ಮಕ್ಕಳ ಕಾನೂನು ಮತ್ತು ಸಂರಕ್ಷಣೆ”ಮಾಹಿತಿ
ಕಾರ್ಕಳ:ಪ್ಪು ಮಾಡಿದಾಗ ಮಾತ್ರ ಭಯ ಇರಬೇಕು. ತಪ್ಪು ಮಾಡದಿರುವಾಗ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಮಕ್ಕಳ ಸ್ನೇಹಿ ಪೊಲೀಸ್ ಆದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕಾರ್ಕಳ ರವರು ಮಕ್ಕಳಿಗೆ ಧೈರ್ಯ ತುಂಬಿದರು.
ಕಾರ್ಕಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಶಾಲೆಯಲ್ಲಿ ಮಕ್ಕಳ ಕಾನೂನು ಮತ್ತೆ ಸಂರಕ್ಷಣೆ ಬಗ್ಗೆ.
112 ತುರ್ತು ಕರೆಯ ಬಗ್ಗೆ. ಪೋಕ್ಸೋ ಕಾಯಿದೆ ಬಗ್ಗೆ. ಮೊಬೈಲ್ ಬಳಕೆ ದುಷ್ಪರಿಣಾಮ. ಸೈಬರ್ ಕ್ರೈಂ. ಸೈಬರ್ ತುರ್ತು ಕರೆ 1930 ಮತ್ತು ಮಾದಕ ದ್ರವ್ಯ ಸೇವನೆ. ಮಾರಾಟ ಇವುಗಳ ಬಗ್ಗೆ. ಮಕ್ಕಳ ಬಿಕ್ಷಾಟನೆ. ವಿದ್ಯಾರ್ಥಿಗಳಿಗೆ ಜಾಗ್ರತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಾನೂನಿನ ಅರಿವಿನಲ್ಲಿ ಬದುಕಿ ತಂದೆ ತಾಯಿ. ಶಾಲಾ ಶಿಕ್ಷರಿಗೆ ಗೌರವ ಕೊಡಬೇಕೆಂದು ಹೇಳಿದರು.
ಶಾಲಾ ಮುಖ್ಯ ಅಧ್ಯಾಪಕರಾದ ಶ್ರೀಮತಿ ಅಸ್ಮಾ ಬಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಆಶಾ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು