ಮಂಗಳೂರು ಹತ್ಯೆ ಪ್ರಕರಣ, ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಶಿವಮೊಗ್ಗ: ಮಂಗಳೂರಿನ ಬಂಟ್ವಾಳ ತಾಲೂಕಿನ ಇರಾ ಕೋಡಿಯ ಅಬ್ದುಲ್ ರಹೀಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿ ,ತಪ್ಪಿತಸ್ಥರಿಗೆ ಶಿಕ್ಷೆ ಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಯಾವುದೇ ಒಂದು ಕೊಲೆ ನಡೆದಲ್ಲಿ, ಪ್ರತೀಕಾರದ ಕೊಲೆ ಎಂದು ಬಿಂಬಿಸುವುದು ಸರಿಯಲ್ಲ. ಯಾವುದೇ ತಪ್ಪು ನಡೆದಲ್ಲಿ ಶಿಕ್ಷಿಸಲು ಕಾನೂನು ಇದೆ. ಎಲ್ಲದಕ್ಕೂ ಒಂದು ಕಾರಣವಿರುತ್ತದೆ. ಮೊದಲು ಕೂಲಂಕುಷವಾಗಿ ಪರಿಶೀಲಿಸಬೇಕು. ಏಕಾಏಕಿ ಮಾಧ್ಯಮಗಳಲ್ಲಿ ಪ್ರತೀಕಾರದ ಕೊಲೆಯೆಂದು ಬಿಂಬಿಸಿದರೆ, ಏನಾಗಲಿದೆ ಎಂದು ಗಮನಿಸಿದ್ದಾರಾ?, ಎಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ.






















































