
ನವದೆಹಲಿ: ಸರ್ಕಾರವು ಮುಂದಿನ ಜೂ.1ರಿಂದ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳನ್ನು ಮತ್ತಷ್ಟು ಬೃಹತ್ ಗಾತ್ರದಲ್ಲಿ ಪ್ರಕಟಿಸಲು ನಿರ್ಧರಿಸಿದೆ.
‘ಚಿತ್ರಸಹಿತ ಎಚ್ಚರಿಕೆ’ ಗಾತ್ರ ಹಿರಿದಾಗಲಿದ್ದು, ಅದರಲ್ಲಿ ಬಾಯಿ ಕ್ಯಾನ್ಸರ್ ಕೊನೇ ಘಟ್ಟಕ್ಕೆ ತಲುಪಿರುವ ವ್ಯಕ್ತಿಯ ಮುಖದ ಚಿತ್ರ ಪ್ರಕಟಿಸಲಾಗುತ್ತದೆ.
ಅಲ್ಲದೆ, “ತಂಬಾಕು ಸೇವನೆಯು ಅತಿ ವೇದನೆಯ ಸಾವು ತರುತ್ತದೆ” ಎಂದು ಮುದ್ರಿಸಲಾಗುತ್ತದೆ.