
ಮಂಗಳೂರು: ನಗರದ ಅಡ್ಯಾರ್‌ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿ ಪುತ್ರ ಅನೀಶ್ ಎಂಬ ಮಗು ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಸಂಭವಿಸಿದೆ.
ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿದ ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡಿದ್ದು ತಕ್ಷಣ ಮನೆಯವರು ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.
ಈ ಕುರಿತು ಗಂಡನ ವಿರುದ್ಧ ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದು ಸೇದಿದ ಬೀಡಿಯ ತುಂಡನ್ನು ಮನೆಯೊಳಗೆ ಬಿಸಾಡಬೇಡಿ ಎಂದು ಎಷ್ಟು ಬಾರಿ ತಿಳಿಸಿದರೂ, ಕೇಳದೇ ಮತ್ತೆ ಬಿಸಾಕಿದ್ದಕ್ಕೆ ಹೀಗಾಯಿತು ಎಂದು ಬೇಸರ ಹೊರಹಾಕಿದ್ದಾರೆ.



















