
ಉಡುಪಿ: ಮಲ್ಪೆ ವ್ಯಾಪ್ತಿಯ ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಬಳಿ ನಡೆದ ಪ್ರವಾಸಿ ಬೋಟ್ ದುರಂತಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಮೃತಪಟ್ಟಿದ್ದಾರೆ. ಮೈಸೂರಿನ ದಿಶಾ (23) ಮೃತ ಯುವತಿ. ಈ ಮೊದಲು ಶಂಕರಪ್ಪ (22) ಹಾಗೂ ಸಿಂಧು (23) ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡ ಧರ್ಮರಾಜ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವಪ್ರಸಿದ್ಧ ಡೆಲ್ಟಾ ಬೀಚ್‌ನಲ್ಲಿ ಮೈಸೂರಿನ ಬಿಪಿಒ ಸಂಸ್ಥೆಯ 28 ಮಂದಿ ಪ್ರವಾಸಿಗರು ಎರಡು ಬೋಟುಗಳಲ್ಲಿ ಕಡಲಿಗೆ ಇಳಿದಿದ್ದು ಕೆಲವರು ಲೈಫ್ ಜಾಕೆಟ್ ಧರಿಸದೇ ಇದ್ದ ಹಿನ್ನೆಲೆಯಲ್ಲಿ ಹಾಗೂ ಬೋಟಿನಲ್ಲಿನ ಅಜಾಗರೂಕ ವರ್ತನೆಯಿಂದ ಬೋಟು ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ನೀರಿಗೆ ಬಿದ್ದವರನ್ನು ಸ್ಥಳೀಯ ಮೀನುಗಾರರು ತಕ್ಷಣ ರಕ್ಷಿಸಿದ್ದಾರೆ. ನೀರಿಗೆ ಬಿದ್ದ 14 ಮಂದಿಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.



















