
ಹೊಸದಿಲ್ಲಿ: ಇಂಡಿಗೋ ವಿಮಾನಯಾನ ಕಂಪನಿಯು ಡಿ.3 ಮತ್ತು 4ರ ನಡುವಿನ ಅವಧಿಯಲ್ಲಿ ವಿಮಾನ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರಿಗೆ 12 ತಿಂಗಳುಗಳ ವಾಯಿದೆ ಹೊಂದಿರುವ 10,000 ರೂ. ಮೌಲ್ಯದ ಪ್ರಯಾಣ ಓಚರ್ ಗಳನ್ನು ನೀಡಲಿದೆ ಎಂದು ತಿಳಿಸಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು 2025 ಡಿಸೆಂಬರ್ 3, 4 ಮತ್ತು 5 ರಂದು ಪ್ರಯಾಣ ಮಾಡಬೇಕಿದ್ದ ನಮ್ಮ ಗ್ರಾಹಕರ ಪೈಕಿ ಹಲವರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಹಲವು ತಾಸುಗಳ ವರೆಗೆ ಸಿಕ್ಕಿಹಾಕಿಕೊಂಡಿರುವುದನ್ನು ವಿಷಾದ ಪೂರ್ವಕವಾಗಿ ಒಪ್ಪಿಕೊಳ್ಳುತ್ತದೆ. ಅವರ ಪೈಕಿ ಹಲವರು ಜನಜಂಗುಳಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಅಂತವರಿಗೆ ನಾವು 10,000 ರೂ. ಮೌಲ್ಯದ ವೋಚರ್ಗಳನ್ನು ನೀಡುತ್ತಿದ್ದೇವೆ. 12 ತಿಂಗಳುಗಳ ಅವಧಿಯಲ್ಲಿ ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಸಲು ಈ ವೋಚರ್ ಅನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.





