
ಕಾರ್ಕಳ: ಮುಂದಿನ ವರ್ಷ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ಏಪ್ರಿಲ್ 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಹಾಗೂ ಮಹಾಮಸ್ತಕಾಭಿಷೇಕ ದಿನಾಂಕ ಘೋಷಣೆ ಕಾರ್ಯಕ್ರಮವು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ನಗರದ ಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ‘ರಾಜಗುರು’, ‘ಧ್ಯಾನಯೋಗಿ’ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಧರ್ಮಾಧಿಕಾರಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ, ಕರ್ನಾಟಕ ಸರಕಾರದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರಾದ ಸುಧಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಹಾಮಸ್ತಕಾಭಿಷೇಕ ಸಮಿತಿ ಕಛೇರಿ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮಸ್ತಕಾಭಿಷೇಕದ ಸಿದ್ಧತೆಗಾಗಿ ವಿವಿಧ ಕಾಮಗಾರಿಗಳಿಗೆ ಸರ್ಕಾರದ ಅನುದಾನಕ್ಕಾಗಿ ಒಟ್ಟು 82 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ ವಿದ್ಯುದ್ದೀಕರಣಕ್ಕಾಗಿ ₹1.5 ಕೋಟಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಸೇರಿವೆ. ಕಳೆದ ಬಾರಿ ಸರ್ಕಾರದಿಂದ ₹7 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಇದಲ್ಲದೆ, ಕಾರ್ಕಳದ ದಾನಶಾಲೆ ರಸ್ತೆ ದ್ವಿಪಥ ಅಭಿವೃದ್ಧಿಗಾಗಿ ₹2.5 ಕೋಟಿ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಯಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಮಪೂಜ್ಯ ‘ರಾಜಗುರು’, ‘ಧ್ಯಾನಯೋಗಿ’ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು
ಸಮಿತಿಯ ಪ್ರಧಾನ ಕಾರ್ಯದೆ್ಶಿ
ಪುಷ್ಪರಾಜ್ ಜೈನ್ , ಸಹ ಕೊಶಾಧಿಕಾರಿ ಪ್ರಭಾತ್ ಕುಮಾರ್, ಉಪಾದ್ಯಕ್ಷರಾದ ಅನಂತರಟಜ ಪೂವಾಣಿ , ಸಂಪತ್ ಸಾಮ್ರಾಜ್ಯ , ಸುದಿರ್ ಪಡಿವಾಳ್ , ಕೆ ಜಯಕಿರ್ತಿ ಕಡಂಬ , ಕಾರ್ಯದರ್ಶಿಗಲಾದ ಹೆಮಚಂದ್ರ ಜೈನ್,ಸುನಿಲ್ ಕುಮಾರ್ ಬಜಗೊಳಿ, ಮಹವಿರ ಹೆಗ್ಡೆ ಮುಡಾರು, ಭರತ ಕುಮಾರ್ ಜೈನ್, ಶಿತಲ್ ಜೈನ್, ಸುಭಾಷ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮಜೈನ್, ಶಿಶುಪಾಲ ಜೈನ್, ಜೊತೆ ಕಾರ್ಯದರ್ಸಿ ಗಲಾದ ಶಶಿಕಾಲ ಹೆಗ್ಡೆ, ಹರ್ಷಿಣಿ ವಿಜಯರಾಜ್, ಮೊಹಿನಿ ವರ್ದಮಾನ್, ನಿರಂಜನ್ ಜೈನ್, ಪೃತ್ವಿರಾಜ್ ಹೆಗ್ಡೆ , ಅದಿರಾಜ ಅಜ್ರಿ ಸಾಂತ್ರಬೆಟ್ಟು, ಅಮೃತ ಮಲ್ಲಿ , ಪ್ರಬಾಕರ ಅತಿಲಾರಿ , ದಿಪಕ್ ಜೈನ್ , ಅಶೊಕ್ ಕುಮಾರ್ ಬಲ್ಳಾಲ್, ವಿನಯ ಅರಿಗ, ವಿನಯ್ ಉದಯ ಕುಮಾರ್, ವಿಖ್ಯಾತ್ ಜೈನ್ , ಚಂದ್ರಕಿರ್ತಿ ಜೈನ್, ಧನಂಜಯ ಜೈನ್ ಉಪಸ್ಥಿತರಿದ್ದರು.








