
ಇತಿಹಾಸ ಪ್ರಸಿದ್ದ ಬೆಳ್ಮಣ್ಣು ಶ್ರೀ
ದುರ್ಗಾಪರಮೇಶ್ವರೀ ದೇವಸ್ಥಾನದ
ಮಂಡಲ ಪೂಜಾ ಮಹೋತ್ಸವವು ಜನವರಿ 3
ರಂದು ಶನಿವಾರ ಶ್ರೀ ಕ್ಷೇತ್ರದಲ್ಲಿ
ಜರಗಲಿದೆ.
ಜನವರಿ 2ರಂದು ಶುಕ್ರವಾರ ಸಂಜೆ 4 ರಿಂದ
ಬೆಳ್ಮಣ್ಣು ಅಯ್ಯಪ್ಪ ಭಕ್ತವೃಂದದ
ಶಿಬಿರದಿಂದ ಹಸಿರುವಾಣಿ ಹೊರೆಕಾಣಿಕೆ
ಮೆರವಣಿಗೆ ಜರಗಲಿದೆ.
ಜನವರಿ 3 ರಂದು ಶನಿವಾರ ಬೆಳಿಗ್ಗೆ ಘಂಟೆ
5.30ಕ್ಕೆ ಪಂಚಾಮೃತಾಭಿಷೇಕ, ನವಕ
ಕಲಶಾಭಿಷೇಕ ಬೆಳಿಗ್ಗೆ ಘಂಟೆ 6.30ಕ್ಕೆ
ಅಲಂಕಾರ ಪೂಜೆ, ಬೆಳಿಗ್ಗೆ ಘಂಟೆ 7.00ರಿಂದ
ತುಲಾಭಾರ ಸೇವೆ, ಬೆಳಿಗ್ಗೆ ಘಂಟೆ 11.30ಕ್ಕೆ
ಮಹಾಪೂಜೆ, ಮಧ್ಯಾಹ್ನ ಘಂಟೆ 12.00ಕ್ಕೆ
ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ,
ಮಧ್ಯಾಹ್ನ ಘಂಟೆ 1.00ರಿಂದ ಸಾರ್ವಜನಿಕ
ಅನ್ನಸಂತರ್ಪಣೆ, ಮಧ್ಯಾಹ್ನ 3-00ರಿಂದ ಶ್ರೀ
ಕ್ಷೇತ್ರದ ಆವರಣದಲ್ಲಿ ನಂದಳಿಕೆ ವಿಶಾಲ
ಯಕ್ಷಕಲಾ ಬಳಗದವರಿಂದ ತಾಳಮದ್ದಳೆ
ಕಾರ್ಯಕ್ರಮ, ಸಂಜೆ 6.00ರಿಂದ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮದ ಅಂಗವಾಗಿ ಸೂಡ ಶ್ರೀ
ಮಯೂರವಾಹನ ಪ್ರಸಾದಿತ ದಶಾವತಾರ
ಯಕ್ಷಗಾನ ಮಂಡಳಿ ಇವರಿಂದ “ವೈಜಯಂತಿ
ಪರಿಣಯ” ಯಕ್ಷಗಾನ ಜರಗಲಿದೆ.
ರಾತ್ರಿ ಘಂಟೆ 7.00ರಿಂದ ಪ್ರಸನ್ನ ಪೂಜೆ,
ಉತ್ಸವ ಬಲಿ ಹಾಗೂ ರಂಗಪೂಜೆ ಜರಗಲಿದೆ
ಎಂದು ಶ್ರೀ ಕ್ಷೇತ್ರದ ಆಡಳಿತ
ಮೊಕ್ತೇಸರರಾದ ವೇದಮೂರ್ತಿ ಶ್ರೀ
ಬಿ.ಕೆ.ವಿಘ್ನೇಶ್ ಭಟ್ ಅವರು ಪತ್ರಿಕಾ
ಪ್ರಕಟನೆಗೆ ತಿಳಿಸಿದ್ದಾರೆ.





