
ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ
ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ
ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ
ಸರಣಿಯ ಮೌಲಿಕ ಕಾರ್ಯಕ್ರಮ
‘ಮೌಲ್ಯಸುಧಾ’ ಜರುಗುತ್ತಾ ಬರುತ್ತಿದೆ.
ಜೂನ್ ತಿಂಗಳ ಮೌಲ್ಯಸುಧಾ ಮಾಲಿಕೆ-37 ತಾರೀಕು 18
ಶನಿವಾರದಂದು ಸಂಜೆ 6 ಗಂಟೆಗೆ ನಡೆಯಲಿದ್ದು,
ಸಂಪನ್ಮೂಲ ವ್ಯಕ್ತಿಯಾಗಿ ರಾಮಕೃಷ್ಣ –
ವಿವೇಕಾನಂದ ಆಶ್ರಮ, ರಾಮಕೃಷ್ಣ ನಗರ,
ತುಮಕೂರಿನ ಪರಮ ಪೂಜ್ಯ ಶ್ರೀ ಶ್ರೀ ಶ್ರೀ
ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು
ಆಗಮಿಸಲಿದ್ದು, ‘ಸ್ವನಿಯಂತ್ರಣ : ಬಂಧನವೋ?
ಸ್ವಾತಂತ್ರ್ಯವೋ’ ಎಂಬ ವಿಷಯದ ಕುರಿತು
ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು
ಭಾಗವಹಿಸ ಬಹುದೆಂದು ಸಂಸ್ಥೆಯ
ಪ್ರಕಟಣೆಯಲ್ಲಿ ತಿಳಿಸಿದೆ.






















































