
ಕಾರ್ಕಳ ಡಿ. 24: ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ
ಸಂಸ್ಥಾಪಕರ ದಿನಾಚರಣೆ ಹಾಗೂ ಇತರ ಸಾಂಸ್ಕೃತಿಕ
ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಕಳ ಜ್ಞಾನಸುಧಾದ ಆವರಣದಲ್ಲಿ ಡಿಸೆಂಬರ್ 26ರಂದು ಸಂಜೆ 6 ಗಂಟೆಯಿಂದ ಸಂಸ್ಥೆಯ “ಯಕ್ಷೋ ತ್ಕರ್ಷ ” ಸದಸ್ಯರಿಂದ “ಲೀಲಾಮೂರ್ತಿ ಶ್ರೀಕೃಷ್ಣ” ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 27 ರಂದು ಸಂಜೆ 5:30ಕ್ಕೆ “ಜ್ಞಾನತೀರ್ಥ ವಿಠಲ” ಎನ್ನುವ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರಾದ ಅಂಕುಶ್ ನಾಯಕ್, ಪಂಡಿತ್ ಜಯತೀರ್ಥ ಮೇವುಂಡಿ, ನರೇಂದ್ರ ಎಲ್ ನಾಯಕ್, ಆಕಾಶ್ ಎಸ್,
ಹೇಮಂತ್ ಜೋಶಿ, ಸೂರ್ಯಕಾಂತ್ ಗೋಪಾಲ್ ಸುರ್ವೆ,
ರಾಜೇಶ್ ಭಾಗವತ್, ಅಶ್ವಥ ಶೆಣೈ ಭಾಗವಹಿಸಲಿದ್ದಾರೆ.
ಸಂಸ್ಥಾಪಕರ ದಿನಾಚರಣೆಯು ಎರಡು ಹಂತಗಳಲ್ಲಿ
ನಡೆಯಲಿದ್ದು, ಡಿಸೆಂಬರ್ 28ರಂದು ಕಾರ್ಕಳ ಜ್ಞಾನಸುಧಾದ
ಆವರಣದಲ್ಲಿ ಸಂಜೆ 5:00 ಗಂಟೆಯಿಂದ ನಡೆಯಲಿರುವ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ
ಶಾಸಕರಾದ ವಿ. ಸುನಿಲ್ ಕುಮಾರ್ ಅವರು ವಹಿಸಲಿದ್ದಾರೆ. ಮುಖ್ಯ
ಅಭ್ಯಾಗತರಾಗಿ ಡಾ. ಶರತ್ ರಾವ್, ಪ್ರೊ. ವೈಸ್ ಚಾನ್ಸಲರ್ ಮಾಹೆ,
ಮಣಿಪಾಲ, ಡಾ. ಜಿ. ರಾಮಕೃಷ್ಣ ಆಚಾರ್, ಚೇರ್‌ಮನ್ SKF,
ಮೂಡುಬಿದ್ರಿ. ಶ್ರೀ ಸಂಕೇತ್ ಜಿ ಬಿ., ಸಾಪ್ಟ್ವೇರ್ ಇಂಜಿನಿಯರ್,
ಗೂಗಲ್ (ಜ್ಞಾನಸುಧಾ ಹಾಗೂ IIಖಿ ವಾರಣಾಸಿ ಸಂಸ್ಥೆಗಳ ಪೂರ್ವ
ವಿದ್ಯಾರ್ಥಿ) ಭಾಗವಹಿಸಲಿದ್ದಾರೆ.
ಜನವರಿ 10 2026 ರಂದು ಮಣಿಪಾಲ ಕ್ರೀಡಾಂಗಣದಲ್ಲಿ ಎರಡನೇ
ಹಂತದ ಸಂಸ್ಥಾಪಕರ ದಿನಾಚರಣೆ ನಡೆಯಲಿದೆ.
ಈ ಸಂದರ್ಭಗಳಲ್ಲಿ ಸಂಸ್ಥೆಗಳಿಂದ ಎಂ.ಬಿ.ಬಿ.ಎಸ್ ಪ್ರವೇಶ ಪಡೆದ
227 ವಿದ್ಯಾರ್ಥಿಗಳನ್ನು, ಜೆ.ಇ.ಇ ಅಡ್ವಾನ್ಸ್ ಹಾಗೂ ಜೆ.ಇ.ಇ ಮೈನ್
ಮೂಲಕ ಐ.ಐ.ಟಿ, ಐ.ಐ.ಎಸ್.ಸಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ
ಎನ್.ಐ.ಟಿ ಪ್ರವೇಶ ಪಡೆದ ಹನ್ನೆರಡು ವಿದ್ಯಾರ್ಥಿಗಳನ್ನು, ಕೆ.ಸಿ.ಇ.ಟಿ ಇಂಜಿನಿಯರ್‌ನಲ್ಲಿ ಒಂದು ಸಾವಿರದೊಳಗಿನ ರ‍್ಯಾಂಕ್ ಪಡೆದ
ನಲವತ್ತೊಂದು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆ
ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿಗಳಿಸಿದ
ವಿದ್ಯಾರ್ಥಿಗಳನ್ನು, ಸಿ.ಎ. ಫೌಂಡೇಶನ್ ತೇರ್ಗಡೆಯಾದ
ವಿದ್ಯಾರ್ಥಿಗಳನ್ನು ಹಾಗೂ ಸಿ.ಎ. ಅಂತಿಮ ಪರೀಕ್ಷೆಯಲ್ಲಿ
ತೇರ್ಗಡೆಯಾದ ಪೂರ್ವ ವಿದ್ಯಾರ್ಥಿಗಳನ್ನು ಹಾಗೂ ಎನ್.ಡಿ.ಎ ಯಲ್ಲಿ
ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಇದೇ ಸಂದರ್ಭದಲ್ಲಿ 227 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪರವಾಗಿ ಪ್ರತಿ
ವಿದ್ಯಾರ್ಥಿಗೆ ರೂ. 2000/- ದಂತೆ ನಾಲ್ಕು ಲಕ್ಷದ ಐವತ್ತ ನಾಲ್ಕು
ಸಾವಿರವನ್ನು ಭಾರತೀಯ ಸೇನೆಗೆ ನೀಡಲಾಗುವುದು.





