23.4 C
Udupi
Saturday, August 16, 2025
spot_img
spot_img
HomeBlogಜ್ಞಾನಸುಧಾ : ಮೌಲ್ಯಸುಧಾ-39ರಲ್ಲಿ ‘ಸ್ವದೇಶ ಮಂತ್ರ’ ಮೌಲ್ಯಶಿಕ್ಷಣವೇ ಸಮಾಜದ ಎಲ್ಲಾ ಕೆಡುಕುಗಳಿಗೆ ರಾಮಬಾಣ: ನಿತ್ಯಾನಂದ ಎಸ್.ಬಿ.

ಜ್ಞಾನಸುಧಾ : ಮೌಲ್ಯಸುಧಾ-39ರಲ್ಲಿ ‘ಸ್ವದೇಶ ಮಂತ್ರ’ ಮೌಲ್ಯಶಿಕ್ಷಣವೇ ಸಮಾಜದ ಎಲ್ಲಾ ಕೆಡುಕುಗಳಿಗೆ ರಾಮಬಾಣ: ನಿತ್ಯಾನಂದ ಎಸ್.ಬಿ.

ಗಣಿತನಗರ : ಸ್ವದೇಶವೇ ಹೆಚ್ಚು ನಮಗೆ
ಪ್ರಾಣಪ್ರಿಯವಾಗಿರುವುದು. ತೃಪ್ತಿಯನ್ನು ಹಾಗೂ
ಆನಂದವನ್ನು ಮಾತೃಭೂಮಿ ಮಾತ್ರ ನೀಡಲು
ಸಾಧ್ಯ. ಅದೆಷ್ಟೋ ವೀರಸೇನಾನಿಗಳ ತ್ಯಾಗ,
ಬಲಿದಾನಗಳಿಗೆ ದೇಶಭಕ್ತಿಯ ಸ್ಪೂರ್ತಿಗೆ
ಸ್ವದೇಶ ಮಂತ್ರವೇ ಅಸ್ತ್ರವಾಗಿತ್ತು ಎಂದು
ಮೈಸೂರಿನ ವಿವೇಕವಂಶಿ ಫೌಂಡೇಶನ್‌ನ
ಸ್ಥಾಪಕರಾದ ಶ್ರೀ ನಿತ್ಯಾನಂದ ಎಸ್.ಬಿ ನುಡಿದರು.


ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ
ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್
ಸಹಯೋಗದಲ್ಲಿ ನಡೆಯುತ್ತಿರುವ
ಮೌಲ್ಯಸುಧಾ ಮಾಲಿಕೆ-39ರಲ್ಲಿ ‘ಸ್ವದೇಶಿ ಚಿಂತನೆ-
ಯುವಕರಲ್ಲಿ ರಾಷ್ಟ್ರಭಕ್ತಿ ಬೆಳವಣಿಗೆ’
ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ
ಮಾತನಾಡಿದರು.


ಈಗಿನ ಶಿಕ್ಷಣ ಕೇವಲ ಹೊಟ್ಟೆಪಾಡಿನ ಗುರಿಯಾಗಿದೆ.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಶಿಕ್ಷಣ ಕೂಡ
ಅತ್ಯಗತ್ಯ. ನಮ್ಮ ಸಮಾಜ
ಸುಂದರವಾಗಬೇಕಾದರೆ, ಅದರ ಭವಿಷ್ಯವನ್ನು
ನಿರ್ಮಾಣ ಮಾಡುವ ಭಾವಿ ಪ್ರಜೆಗಳಾದ
ವಿದ್ಯಾರ್ಥಿಗಳಿಗೆ ಸಿಗಲೇ ಬೇಕಾದ ನೈತಿಕತೆಯನ್ನು
ಈ ಮೌಲ್ಯಸುಧಾದ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಕೊಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್,
ಸಿ.ಇ.ಒ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ
ಕೊಡವೂರ್, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ,
ಉಪ ಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು.
ಆಂಗ್ಲಭಾಷಾ ಉಪನ್ಯಾಸಕಿ ಕು.ದಿವ್ಯ
ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page