
ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಮಿಲಿಯಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಸೃಜನಶೀಲ ಬೋಧನೆಯಿಂದ ಮನೆ ಮಾತಾಗಿರುವ ಜೇಸಿ ಶಾಲಾ ಶಿಕ್ಷಕಿ ವಂದನಾ ರೈ ಯವರಿಗೆ ಶಾರ್ಜಾ ಕರ್ನಾಟಕ ಸಂಘ ನೀಡುವ ಅತ್ಯುನ್ನತ ಅಂತರಾಷ್ಟ್ರೀಯ ಪ್ರಶಸ್ತಿ “ಮಯೂರ ವಿದ್ಯಾರತ್ನ” ನೀಡಿ ಗೌರವಿಸಲಾಗಿದೆ. ಇವರ ವಿಶಿಷ್ಟ ಶೈಲಿಯ ನೃತ್ಯ ಸಂಗೀತಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನಾ ಕ್ರಮ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಾರಗೊಂಡು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ ಅಂತರಾಷ್ಟ್ರೀಯ ಪ್ರಶಸ್ತಿ ಇವರ ಪಾಲಾಗಿದೆ.
ವೇದಿಕೆಯಲ್ಲಿ ಮೆಂಬರ್ ಆಫ್ ರೂಲಿಂಗ್ ಫ್ಯಾಮಿಲಿ ಎಚ್. ಎಚ್ ಶೇಕ್ ರಾಶೀದ್ ಬಿನ್ ಅಬ್ದುಲ್ಲಾ ಬಿನ್ ಎಸಾ ಅಲ್ ಮೌಲಾ (ಫ್ರಿನ್ಸ್) ಡಾ.ಬೂ ಗ್ರೂಪ್ ಆಫ್ ಕಂಪನಿಯ ಚೇರ್ ಮ್ಯಾನ್, ಉದ್ಯಮಿ ಜೇಮ್ ಮೆಂಡೋನ್ಸಾ ಎಮರಾತಿಯ ಖ್ಯಾತ ನಟ ಅಬ್ದುಲ್ಲಾ ಅಲ್ ಜಪಾಲಿ, ಡಿಸೈನರ್ ನಾದಿನಿ ಎಲಿತೀ, ಅಧ್ಯಕ್ಷ ಸತೀಶ್ ಪೂಜಾರಿ, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ಎಂ, ಎಂ.ಇ ಸುಗಂಧರಾಜ್ ಬೆಕಲ್, ವಿಘ್ನೇಶ್ ಕುಂದಾಪುರ ಮತ್ತು ಮಹಮ್ಮದ್ ಅಬ್ರಾರ್ ಉಲ್ಲ ಉಪಸ್ಥಿತರಿದ್ದರು.






















































