
ಈ ಶಿಸ್ತು ಬದ್ಧವಾದ ಶಾಲೆಯಲ್ಲಿ ಕರಾಟೆ ಕಲಿಸುವುದೇ ಒಂದು ಯೋಗ. ಇಲ್ಲಿ ಕಲಿತ ವಿದ್ಯಾರ್ಥಿಗಳು ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಹುಮಾನ ಗಳಿಸಿದ್ದಾರೆ. ನಾವು ಆರೋಗ್ಯ ವೃದ್ಧಿಸಲು ತುಂಬಾ ದುಡ್ಡು ಖರ್ಚು ಮಾಡುತ್ತೇವೆ ಅದರ ಬದಲು ಯೋಗ ಕರಾಟೆಯನ್ನು ಆರಂಭದಲ್ಲಿಯೇ ಕಲಿತರೆ ರೋಗ ಮುಕ್ತವಾಗುತ್ತೇವೆ. ಜೇಸಿ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಿದ್ದಾರೆ, ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರವರು ಹೇಳಿದರು.
ಜೆಸಿಐ ಅಧ್ಯಕ್ಷ್ಯೆ ಶ್ವೇತಾಜೈನ್ ರವರು ಯೋಗ ಮನಸ್ಸಿಗೆ ಮತ್ತು ದೇಹಕ್ಕೆ ವ್ಯಾಯಾಮ ಕೊಡುತ್ತದೆ. ಈ ಶಾಲೆಯಲ್ಲಿ ಪಠ್ಯೇತರ ತರಗತಿಗಳ ಆರಂಭವನ್ನು ಜೂನ್ ತಿಂಗಳ ಮೊದಲಿಗೆ ಮಾಡಿದರೆ, ಇಂದು ಪಠ್ಯೇತರ ತರಗತಿಗಳ ಉದ್ಘಾಟನೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಜೆಸಿ ಚಿತ್ತರಂಜನ್ ಶೆಟ್ಟಿ ಯವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಠ್ಯೇತರ ಚಟುವಟಿಕೆಗಳ ತರಬೇತುದಾರರು ನಮ್ಮ ಶಾಲೆಗೆ ಬಂದಾಗ ನಮ್ಮ ಶಾಲೆ ಬೆಳಗುತ್ತದೆ. ಶಾಲೆಯ ಗುರುಬಲ ಹೆಚ್ಚಾಗುತ್ತದೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ಅವರ ಪ್ರೇರಣೆಯಿಂದ ಬೆಳೆದಿದ್ದಾರೆ. ನಮ್ಮ ಮಕ್ಕಳ ಪ್ರಶಸ್ತಿ ಬಹುಮಾನಗಳಿಗೆ ಪಠ್ಯೇತರ ತರಗತಿಗಳ ಶಿಕ್ಷಕರು ಕಾರಣ. ಈ ಎಲ್ಲಾ ಶಿಕ್ಷಕರ ಸಾಧನೆ ಸ್ಲಾಘನೀಯವಾದದು.ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಶ್ರೀ ಲಕ್ಷ್ಮಿನಾರಾಯಣ ಆಚಾರ್ಯ, ಚಿತ್ರಕಲಾ ಶಿಕ್ಷಕ ಸುಜೇಂದ್ರ ರವರು, ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್, ಚಂಡೆ ಮದ್ದಳೆ ಶಿಕ್ಷಕ ಆನಂದಗುಡಿಗಾರ್, ಸಂಗೀತ ಶಿಕ್ಷಕಿ ಶ್ಯಾಮಲಾ ಭಟ್, ಯಕ್ಷಗಾನ ಶಿಕ್ಷಕ ಸತೀಶ್ ಮಡಿವಾಳ, ಭರತನಾಟ್ಯ ಶಿಕ್ಷಕಿ ವಿಜಯಶ್ರೀ, ಸೆಮಿ ಕ್ಲಾಸಿಕಲ್ ನೃತ್ಯ ಶಿಕ್ಷಕಿ ವಂದನಾ ರೈ, ಯೋಗ ಶಿಕ್ಷಕಿ ಶಿಲ್ಪಾ ಶೆಟ್ಟಿ, ಜೆ ಸಿ ಐ ಅಧ್ಯಕ್ಷ್ಯೆ ಶ್ವೇತಾ ಜೈನ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ್ಯೆ ಸುಪ್ರಿಯಾ ಶೆಟ್ಟಿರವರು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.






