
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನಾಚರಣೆ.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪರಿಸರ ಪ್ರೇಮವನ್ನು ಬೆಳೆಸುವಂತೆ ಮಾಡಲು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಜೈವಿಕ ಅನಿಲ ಉತ್ಪತ್ತಿ ಮತ್ತು ಅದರ ಸದುಪಯೋಗಗಳ ಬಗ್ಗೆ ತಿಳಿಯಲು ಜೈವಿಕ ಅನಿಲವನ್ನು ತಯಾರಿಸಿದರು. ಪಕ್ಷಿಗಳ ಸಂಕುಲ ಸಂರಕ್ಷಣೆಗೆ ಮತ್ತು ಅವುಗಳಿಗೆ ಆಹಾರ ನೀಡುವ ಮಾದರಿ ತಯಾರಿಸಿದರು. ಸಾವಯವ ಗೊಬ್ಬರವನ್ನು ,ಶಾಲೆಯ ಹಸಿ ಕಸಗಳಿಂದ ತಯಾರಿಸಿದರು .

ನೀರಿನ ಸಂರಕ್ಷಣೆಗಾಗಿ ಡ್ಯಾಮ್ ಗಳನ್ನು ನಿರ್ಮಿಸಿದರು. ನೀರು ಇಂಗಿಸುವ ಗುಂಡಿಯನ್ನು ರಚಿಸಿದರು. ಪ್ಲಾಸ್ಟಿಕ್ ನಂತಹ ವಸ್ತುಗಳಿಂದ ಮರುಬಳಕೆಯ ವಸ್ತುಗಳ ರತಯಾರಿಸಿದರು. ಶಿಕ್ಷಕಿ ಶ್ರೀಮತಿ ವಿನಿತಾರವರು ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯನಿಯವರು ಹಾಗೂ ಶಿಕ್ಷಕ ಬೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಸ್ನೇಹಾ ಮತ್ತು ಶ್ರೀಮತಿ ಪ್ರೀತಿ ಯವರು ನಿರ್ವಹಿಸಿದರು.








