
ನಾವು ಆರೋಗ್ಯ ವೃದ್ಧಿಸಲು ತುಂಬಾ ದುಡ್ಡು ಖರ್ಚು ಮಾಡುತ್ತೇವೆ ಅದರ ಬದಲು ಯೋಗ ಆರಂಭದಲ್ಲಿಯೇ ಕಲಿತರೆ ರೋಗ ಮುಕ್ತ ವಾಗುತ್ತೇವೆ. ಭಾರತೀಯ ಪರಂಪರೆಯ ಪ್ರಾಚೀನ ಸಂಸ್ಕೃತಿ ಯೋಗ.
ಜೇಸಿ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಿದ್ದಾರೆ, ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರವರು ಹೇಳಿದರು. ಜೆಸಿಐ ಅಧ್ಯಕ್ಷೆ ಶ್ವೇತಾಜೈನ್ ರವರು, ಯೋಗ ಮನಸ್ಸಿಗೆ ಮತ್ತು ದೇಹಕ್ಕೆ ವ್ಯಾಯಾಮ ಕೊಡುತ್ತದೆ, ಏಕಾಗ್ರತೆ ಯ ಶಕ್ತಿ ಹೆಚ್ಚುತ್ತದೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವಾಗಿರುತ್ತದೆಯೋ ಅಷ್ಟೇ ಆಂತರಿಕ ಸೌಂದರ್ಯ, ಆರೋಗ್ಯ ಎರಡು ಕೂಡ ಬಹಳ ಅವಶ್ಯಕವಾಗಿರುತ್ತದೆ. ಇವೆರಡನ್ನು ಸಮನಾಗಿ ಇಟ್ಟುಕೊಳ್ಳುವುದಕ್ಕೆ ಯೋಗ ಸಹಾಯ ಮಾಡುತ್ತದೆ ಎಂದರು.
ಶಾಲಾ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಯವರು ,ಯೋಗ ನಮ್ಮ ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಅದಕ್ಕಾಗಿಯೇ ನಮ್ಮ ಯುವ ಜನತೆ, ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಯೋಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ದ ಅಧ್ಯಕ್ಷರು ಜೇಸಿ ಶ್ವೇತಾ ಎಸ್ ಜೈನ್ , ಶಾಲಾ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಯವರು, ಶ್ರೀ ಲಕ್ಷ್ಮಿನಾರಾಯಣ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು , ಯೋಗ ತರಬೇತುದಾರರಾದ ಶ್ರೀಮತಿ ಶಿಲ್ಪಾ ಶೆಟ್ಟಿ, ಜೇಸಿ ಸುಪ್ರಿಯಾ, ಜೇಸಿ ಸುಶಾಂತ್ ಶೆಟ್ಟಿ ಉಪಸ್ಥಿತರಿದ್ದರು.






