
ವಲಯ 15 ರ ಪ್ರತಿಷ್ಟಿತ ಘಟಕ ಜೆಸಿಐ ಕಾರ್ಕಳ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ” ಸೆಲ್ಯೂಟ್ ದ ಸೈಲೆಂಟ್ ವರ್ಕ್” ಗೌರವವನ್ನು, ಜೇಸಿಐ ಕಾರ್ಕಳದ ಹಿರಿಯ ಸದಸ್ಯರು ಹಾಗೂ ಕಾರ್ಕಳ ರೆಡ್ ಕ್ರಾಸ್ ಘಟಕದ ಚೇರ್ಮೆನ್ , ಬಹಳಷ್ಟು ಹೆಸರುವಾಸಿಯಾದ ಖ್ಯಾತ ಹೃದ್ರೋಗ ತಜ್ಞರಾದ ಡಾಕ್ಟರ್ ಕೆ ರಾಮಚಂದ್ರ ಜೋಶಿ ಇವರನ್ನು ವೈದ್ಯರ ದಿನಾಚರಣೆಯ ಪ್ರಯುಕ್ತ ಗುರುತಿಸಿ ಗೌರವಿಸಲಾಯಿತು. ಅತ್ಯಂತ ಜನಪ್ರಿಯ ,ಅಷ್ಟೇ ಬೇಡಿಕೆಯ ವೈದ್ಯರಾದರೂ ಸದ್ದಿಲ್ಲದೆ ನಿಗರ್ವಿಯಾಗಿ ಕೈಗೆಟಕುವ ವೈದ್ಯರಾಗಿ “ವೈದ್ಯೋ ನಾರಾಯಣ ಹರಿಃ” ಎಂಬ ಮಾತಿಗೆ ಅರ್ಥ ನೀಡಿದವರು ಡಾ| ರಾಮಚಂದ್ರ ಜೋಶಿಯವರು.

ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಎಸ್ ಜೈನ್, ಪೂರ್ವ ವಲಯ ಅಧ್ಯಕ್ಷರು ಹಾಗೂ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಚಿತ್ತರಂಜನ್ ಶೆಟ್ಟಿ, ವಲಯ ಉಪಾಧ್ಯಕ್ಷರಾದ CA ಅನ್ವೇಶ್ ಶೆಟ್ಟಿ, ಸುಂದರ್ ಹೆಗ್ಡೆ ನಿವೃತ್ತ ಮುಖ್ಯೋಪಾಧ್ಯಾಯರು, ನಿರಂಜನ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂರ್ವ ವಲಯ ಉಪಾಧ್ಯಕ್ಷರು ಪೂರ್ವ ವಲಯ ಅಧಿಕಾರಿಗಳು ವಲಯ ಅಧಿಕಾರಿಗಳು ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಹಾಗೂ ದೇಸಿಯ ಸದಸ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ರೇವತಿ ಶೆಟ್ಟಿ ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ಶ್ವೇತಾ ಎಸ್ ಜೈನ್ ಸ್ವಾಗತಿಸಿದರು . ಶಿವಕುಮಾರ್ ಜೆಸಿವಾಣಿ ವಾಚಿಸಿ, ಕಾರ್ಯದರ್ಶಿ ಸುಶ್ಮಿತಾ ಧನ್ಯವಾದ ನೆರವೇರಿಸಿದರು.
