
ವಲಯ 15 ರ ಪ್ರತಿಷ್ಟಿತ ಘಟಕ ಜೆಸಿಐ ಕಾರ್ಕಳ ವತಿಯಿಂದ ಕುಟುಂಬ ಸಮ್ಮಿಲನ ಮತ್ತು ಸಾಧಕರಿಗೆ ಸನ್ಮಾನ ವಿಶೇಷ ಕಾರ್ಯಕ್ರಮ ಜೆಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 1ರಂದು ನಡೆಯಿತು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೂರ್ವ ವಲಯ ಅಧ್ಯಕ್ಷರು ಹಾಗೂ ಸಂಸ್ಥೆಯ ಮಾರ್ಗದರ್ಶಕರಾದ ಚಿತ್ತರಂಜನ್ ಶೆಟ್ಟಿಯವರು ಮಾತನಾಡಿ ಕಾರ್ಯಕ್ರಮದ ಆಯೋಜನೆಗೆ ಶುಭವನ್ನ ಹಾರೈಸಿದರು.
ವಲಯ ಉಪಾಧ್ಯಕ್ಷರಾದ ಸಿಎ ಅನ್ವೇಶ್ ಶೆಟ್ಟಿ ಇವರು ಮಾತನಾಡಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು. ಲೆಕ್ಕ ಪರಿಶೋಧಕರ ದಿನದಂದು ಅವರಿಗೆ ಜೇಸಿಐ ಕಾರ್ಕಳದಿಂದ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಾಧಕ ಸನ್ಮಾನವನ್ನು ಸ್ವೀಕರಿಸಿದ ಡಾಕ್ಟರ್ ಕೆ ಆರ್ ಜೋಶಿ ಅವರು ಮಾತನಾಡಿ ಕುಟುಂಬ ಸಮ್ಮಿಲನ ಮಹತ್ವವನ್ನು ತಿಳಿಸಿದರು .ಇನ್ನೋರ್ವ ಸಾಧಕ ನಿರಂಜನ್ ಅವರು ಮಾತನಾಡಿ ಜೆಸಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜೇಸಿ ವಾಣಿ ಕಾರ್ಡ್ ಬಿಡುಗಡೆಗೊಳಿಸಲಾಯಿತು .ಇದೇ ಸಂದರ್ಭದಲ್ಲಿ ಜೇಸಿಐ ಕಾರ್ಕಳ ದ ಆಶ್ರಯದಲ್ಲಿ ಹಾಗೂ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ 4 ವಿದ್ಯಾರ್ಥಿಗಳಿಗೆ ತಲ 5 ಸಾವಿರದಂತೆ, 20,000 ರೂಪಾಯಿ ವಿದ್ಯಾರ್ಥಿವೇತನ ಚೆಕ್ ಅನ್ನು ಅವಿನಾಶ್ ಶೆಟ್ಟಿಯವರ ಮುಖೇನ ನೀಡಲಾಯಿತು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಂದರ ಹೆಗಡೆಯವರು ಮಾತನಾಡಿ ಅವರ ಕಾಲಾವಧಿಯಲ್ಲಿ ಜೇಸಿಯ ಕುಟುಂಬ ಸಮ್ಮಿಲನ ಕಾರ್ಯಕ್ರಮದ ರೀತಿಗಳನ್ನು ಮೆಲುಕು ಹಾಕಿ, ಇಂತಹ ಕಾರ್ಯಕ್ರಮಗಳು ಸಂಸ್ಥೆಗಳಲ್ಲಿ ನಡೆಯಬೇಕು ಎಂದು ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಎಸ್ ಜೈನ್, ಪೂರ್ವ ವಲಯ ಉಪಾಧ್ಯಕ್ಷರು ಪೂರ್ವ ವಲಯ ಅಧಿಕಾರಿಗಳು, ವಲಯ ಅಧಿಕಾರಿಗಳು,
,ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಲೇಡಿ ಜೇಸಿ ನಿರ್ದೇಶಕರು ಹಾಗೂ ಜೇಸಿಯ ಸದಸ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ರೇವತಿ ಶೆಟ್ಟಿ ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ಶ್ವೇತಾ ಎಸ್ ಜೈನ್ ಸ್ವಾಗತಿಸಿದರು . ಶಿವಕುಮಾರ್ ಜೆಸಿವಾಣಿ ವಾಚಿಸಿ, ಕಾರ್ಯದರ್ಶಿ ಸುಶ್ಮಿತಾ ಧನ್ಯವಾದ ನೆರವೇರಿಸಿದರು.