
ವಲಯ 15 ರ ಪ್ರತಿಷ್ಟಿತ ಘಟಕ ಜೆಸಿಐ ಕಾರ್ಕಳಕ್ಕೆ ರಾಷ್ಟ್ರೀಯ ಅಧ್ಯಕ್ಷರು ಅಧಿಕೃತ ಭೇಟಿಯನ್ನು ನೀಡಿದರು. ಭವ್ಯವಾದ ಸ್ವಾಗತದೊಂದಿಗೆ ಡೇ ಕೇರ್ ನೂತನ ಕೊಠಡಿಯ ಉದ್ಘಾಟನೆ ದೀಪ ಬೆಳಗಿಸುವುದರ ಮುಖೇನ ನೆರವೇರಿತು.
ಸಭಾಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳವನ್ನು ಉದ್ದೇಶಿಸಿ ಮಾತಾಡಿದ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜಂಜುನ್ವಾಲ , ಪ್ರತೀ ಕಾರ್ಯಕ್ರಮಗಳನ್ನು ನಾನು ಗಮನಿಸಿದ್ದೇನೆ, ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ ಅತ್ಯಂತ ಕ್ರಿಯಾಶೀಲ ಅಧ್ಯಕ್ಷರು ಎಂದು ಜೆಸಿಐ ಕಾರ್ಕಳದ ಅಧ್ಯಕ್ಷರಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ
ಜೆಸೀಸಿ ಶಾಲೆಗೆ ಬರುವುದೆಂದರೆ ನನಗೆ ತುಂಬಾ ಸಂತೋಷ ನೀವು ನೀಡಿದ ಅದ್ದೂರಿ ಸ್ವಾಗತ ಹೃದಯ ಮುಟ್ಟಿತು ತುಂಬಾ ಅದ್ಭುತವಾದ “ಡೇ ಕೇರ್ ಸೆಂಟರ್” ಉದ್ಘಾಟನೆ ಮಾಡಿದ್ದೇನೆ. ಮಕ್ಕಳು ತಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಪ್ರಗತಿಯನ್ನು ಸಾಧಿಸಲು ಸಾಧ್ಯ ಇದೊಂದು ನನ್ನ ಮಕ್ಕಳ ಜೊತೆಗಿನ ಉತ್ತಮ ಪ್ರಯಾಣ ಎಲ್ಲರಿಗೂ ಒಳ್ಳೆಯದಾಗಲಿ ಎಂದು “ಡೇ ಕೇರ್ ಸೆಂಟರ್” ಅನ್ನು ಉದ್ಘಾಟನೆ ಮಾಡಿದ JCI ರಾಷ್ಟ್ರೀಯ ಅಧ್ಯಕ್ಷರು JFS ಅಂಕುರ್ ಜುಂಜುನ್ವಾಲ ಹೇಳಿದರು.
JC ಅಭಿಲಾಷ್ ರವರು ಮಾತನಾಡಿ ನಮಗೆ ನೀವು ನೀಡಿದ ಸ್ವಾಗತ ಭವ್ಯವಾದ ಸ್ವಾಗತ. ನಾನು ಪ್ರತಿಸಲ ಶಾಲೆಗೆ ಬಂದಾಗ ಇಂತಹ ಹೊಸ ಸೆಂಟರ್ ಗಳ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ, ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.
“ಡೇ ಕೇರ್ ಸೆಂಟರ್” ಗೆ ಸಹಾಯಧನ ನೀಡಿದ ಶ್ರೀಮತಿ ಸುಲತಾ ಶೆಟ್ಟಿ, ಜೆಸಿ ದಿನೇಶ್, ಜೆಸಿ ಸಂತೋಷ್ ಕುಮಾರ್ ಜೈನ್, ವೃಷಭ ರಾಜ್ ಕಡಂಬ, ಪದ್ಮಪ್ರಸಾದ್ ಜೈನ್, ಜೆ ಸಿ ವಿಕ್ಯಾತ್ ಶೆಟ್ಟಿ, ಜೆಸಿ ಸಮರ್ಥ್, ಸುದರ್ಶನ್ ಶೆಟ್ಟಿ, ಜೆಸಿ ವಿಘ್ನೇಶ್ ಪ್ರಸಾದ್ ಹಾಗೂ ಜೆಸಿಐನ ನಿಕಟಪೂರ್ವ ಅಧ್ಯಕ್ಷರಿಗೂ ಸನ್ಮಾನ ಮಾಡಲಾಯಿತು.

ಸಭಾಧ್ಯಕ್ಷೆಯನ್ನು ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ಅವರು ವಹಿಸಿದ್ದರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಶ್ ಬಿ ಎ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರು ವಿಘ್ನೇಶ್ ಪ್ರಸಾದ್, ಕಾಶಿನಾಥ್ ಗೊಗಾಟೆ ನಿಕಟ ಪೂರ್ವ ಅಧ್ಯಕ್ಷರು ಪ್ರಚಿತ್ ಕುಮಾರ್,ಕಾರ್ಯದರ್ಶಿ ಸುಶ್ಮಿತಾ ರಾವ್ ,ಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಸುರೇಖಾ ರಾಜ್, ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಹಾಗೂ ಜೆಸಿಐ ಕಾರ್ಕಳದ ಪೂರ್ವಾಧ್ಯಕ್ಷರು, ಸದಸ್ಯರು, ಜೇಸಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಕ್ಷರು ಶ್ವೇತಾ ಎಸ್ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಸುಶ್ಮಿತಾ ರಾವ್ ವಂದಿಸಿದರು