ಜೆಸಿಐ ಕಾರ್ಕಳದ ಪೂರ್ವಾಧ್ಯಕ್ಷ ವಲಯ ತರಬೇತುದಾರ ದಿನೇಶ್ ಕೆ ರವರಿಗೆ ಪ್ರೇರಣಾ ಪುರಸ್ಕಾರ

ಜೇಸಿಐ ಕಾರ್ಕಳದ ಆತಿಥ್ಯದಲ್ಲಿ ವಲಯ 15 ರ G&D ಹಾಗೂ ತರಬೇತಿ ಸಮ್ಮೇಳನ ನಗಾರಿ , ಕಾರ್ಕಳದ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆಯಿತು.
ತರಬೇತಿ ಸಮ್ಮೇಳನದಲ್ಲಿ ಜೆಸಿಐ ಕಾರ್ಕಳದ ಪೂರ್ವಧ್ಯಕ್ಷರಾದ ಹಾಗೂ ವಲಯ ತರಬೇತುದಾರರಾದ ದಿನೇಶ್ ಕೆ ರವರಿಗೆ ವಲಯ 15 ತರಬೇತಿ ವಿಭಾಗದಲ್ಲಿ ಪ್ರೇರಣಾ ಪುರಸ್ಕಾರ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಜೈನ್, ಸಮದ್ ಖಾನ್, ದಿವ್ಯ ಸ್ಮಿತಾ ಹಾಗೂ ಸುಶ್ಮಿತಾ ರಾವ್, ರೇವತಿ ಶೆಟ್ಟಿ, ಶಾಹಿನ್ ಹಾಗೂ ಜೆಸಿಐ ಕಾರ್ಕಳದ ಸದಸ್ಯರು ಉಪಸ್ಥಿತರಿದ್ದರು.