
ಜೇಸಿಐ ಕಾರ್ಕಳಕ್ಕೆ ಜುಲೈ 15 ರಂದು ವಲಯ 15 ರ ವಲಯ ಅಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಶ್ ಬಿ ಎ ಅಧಿಕೃತ ಭೇಟಿ ನೀಡಿದರು.
ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಕ್ಯುರಿಟಿ ಕ್ಯಾಬಿನ್ ಹಾಗೂ ಹೊಸ ಶಾಲಾ ವಾಹನಕ್ಕೆ ಚಾಲನೆಯನ್ನು ನೀಡಿದರು. ನಂತರ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಒಂದು ಒಳ್ಳೆಯ ಯೋಜನೆಯೊಂದಿಗೆ ಒಳ್ಳೆಯ ಯೋಚನೆಯೊಂದಿಗೆ ಜೇಸಿ ಸಂಸ್ಥೆ ಹಾಗೂ ಜೇಸಿ ಶಾಲೆಯ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಕೋಟಿ ಚೆನ್ನಯ ಥೀಮ್ ಪಾರ್ಕ್ ವೀಕ್ಷಣೆ ಹಾಗೂ ಪದಾಧಿಕಾರಿಗಳ ಜೊತೆ ಚರ್ಚೆಯನ್ನು ನಡೆಸಿ
ನಂತರ ಸುತ್ತಮುತ್ತಲಿನ ದೇವಸ್ಥಾನ ಮಾರಿಗುಡಿ, ಚತುರ್ಮುಖ ಕೆರೆ ಬಸದಿ ಹಾಗೂ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ, ಬದುಕು ನಂದಾದೀಪ ಯೋಜನೆ – ಅರ್ಹರಿಗೆ ಮನೆಯ ದಾನ ಕಾರ್ಯಕ್ರಮ ಜೇಸಿಐ ಕಾರ್ಕಳ ಲೇಡಿ ಜೇಸಿ ವತಿಯಿಂದ ನೆರವೇರಿಸಲಾಯಿತು.
ನಂತರ ಜೆಸಿಐ ಕಾರ್ಕಳದ ಉಪಾಧ್ಯಕ್ಷರಾದ ಜೇಸಿ ವಿಖ್ಯಾತ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಹೋಟೆಲ್ ಪ್ರಕಾಶ್ ಇಲ್ಲಿ ಸಾರ್ವಜನಿಕ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಜೆಸಿಐ ಕಾರ್ಕಳದ ಅಧ್ಯಕ್ಷರು ವರದಿ ಮಂಡಣೆ ಮಾಡಿ ವಲಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಭಿಲಾಶ್ ಅವರು ಜೆಸಿಐ ಕಾರ್ಕಳ ನನ್ನ ಮನಸ್ಸಿಗೆ ಹತ್ತಿರವಾದ ಘಟಕ, ಒಳ್ಳೆಯ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿದ್ದಾರೆ, ಮುಂದೆಯೂ ಅವಕಾಶಗಳನ್ನು ಉಪಯೋಗಿಸಿ ಒಳ್ಳೆಯ ಕಾರ್ಯಗಳೊಂದಿಗೆ ಪ್ರಶಸ್ತಿಗಳು ಅರಸಿಕೊಂಡು ಬರಲಿ ಎಂದು ಅಭಿನಂದಿಸಿ ಶುಭ ಹಾರೈಸಿದರು, ವಲಯ ಅಧ್ಯಕ್ಷರ ಆಪ್ತ ರಾಘವೇಂದ್ರ ಕುಲಾಲ್ ಮಾತನಾಡಿ ಒಳ್ಳೆಯ ಸ್ವಾಗತವನ್ನು ನೀಡಿ ಒಳ್ಳೆಯ ಆತಿಥ್ಯ ನೀಡಿದ್ದೀರಿ, ಕಾರ್ಯಕ್ರಮಗಳು ಉತ್ತಮವಾಗಿದೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.
ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಎಸ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದು, ವೇದಿಕೆಯಲ್ಲಿ ಪೂರ್ವ ವಲಯ ಅಧ್ಯಕ್ಷರು ಜಾನ್ ಆರ್ ಡಿಸಿಲ್ವಾ ಹಾಗೂ ಚಿತ್ತರಂಜನ್ ಶೆಟ್ಟಿ, ವಲಯ ಉಪಾಧ್ಯಕ್ಷ ಅನ್ವೇಶ್ ಶೆಟ್ಟಿ, ವಲಯ ನಿರ್ದೇಶಕರು ವಿಘ್ನೇಶ್ ಪ್ರಸಾದ್, ಕಾರ್ಯಕ್ರಮ ಪ್ರಾಯೋಜಕರು ವಿಖ್ಯಾತ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರು ದಿನೇಶ್ ನಾಯಕ್ ಕಾರ್ಯದರ್ಶಿ ಸುಶ್ಮಿತಾ, ಲೇಡಿ ಜೇಸಿ ನಿರ್ದೇಶಕಿ ಶಾಹಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಪೂರ್ವಾಧ್ಯಕ್ಷರು ಹಾಗೂ ಸರ್ವಸದಸ್ಯರು ಕುಟುಂಬ ವರ್ಗದವರು ಉಪಸ್ಥಿತರಿದ್ದರು. ದಿನೇಶ್ ನಾಯಕ್ ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ರೇವತಿ ಶೆಟ್ಟಿ ಜೇಸಿ ವಾಣಿ ವಾಚಿಸಿದರು . ಅಧ್ಯಕ್ಷರು ಶ್ವೇತಾ ಎಸ್ ಜೈನ್ ಸ್ವಾಗತಿಸಿ ಕಾರ್ಯದರ್ಶಿ ಸುಶ್ಮಿತಾ ಧನ್ಯವಾದ ನೆರವೇರಿಸಿದರು.
