
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ
ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಅಡ್ವಾನ್ಸ್ಡ್ 2025
ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಐವರು ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗಿನರ‍್ಯಾಂಕ್ ಗಳಿಸಿದ್ದಾರೆ. ಜನರಲ್ ಮೆರಿಟ್ ನಲ್ಲಿ ತರುಣ್ ಎ.ಸುರಾನಾ (2403) ( ಕೆಟಗರಿಯಲ್ಲಿ429 ರ‍್ಯಾಂಕ್),ಮನೋಜ್
ಕಾಮತ್( 3911 ) (ಜನರಲ್ ಇ.ಡಬ್ಲು.ಎಸ್ 394 ರ‍್ಯಾಂಕ್). ಆಕಾಶ್
ಪ್ರಭು (5105 ), ಚಿಂತನ್ ಮೇಗಾವತ್ (6375 )
(ಕೆಟಗರಿಯಲ್ಲ್ಲಿ142 ರ‍್ಯಾಂಕ್),ವಿಷ್ಣು ಧರ್ಮಪ್ರಕಾಶ್
(8565) ರ‍್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು
ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಎ.ಪಿ.ಜಿ.ಇ.ಟಿ ಯ ಅಧ್ಯಕ್ಷರಾದ
ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.





















































