ಜೇಸಿಐ ಕಾರ್ಕಳದ ಉಪಾಧ್ಯಕ್ಷ ಅವಿನಾಶ್ ಶೆಟ್ಟಿ ಅವರಿಗೆ ಸಾಧನಶ್ರೀ ಪ್ರಶಸ್ತಿ

ಜೇಸಿಐ ಭಾರತ ವಲಯ 15 ರ ಮೃದಂಗ ವಲಯ ಸಮ್ಮೇಳನ ಜೆಸಿಐ ಮಡಂತ್ಯಾರು ಘಟಕದ ಅತಿಥ್ಯದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಜೇಸಿಐ ಕಾರ್ಕಳದಿಂದ ವಲಯದ ವ್ಯವಹಾರ ಸಮ್ಮೇಳನದ, ಸಾಧನಶ್ರೀ ಪ್ರಶಸ್ತಿಗೆ ಜೇಸಿಐ ಕಾರ್ಕಳ ದ ಬಿಸಿನೆಸ್ ವಿಭಾಗದ ಉಪಾಧ್ಯಕ್ಷರು, ಬಿಸಿನೆಸ್ ಐಕಾನ್, ಸಮಾಜಿಕ, ಧಾರ್ಮಿಕ,ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು, ತನ್ನದೇ ಆದ ಸೇವೆಯನ್ನು ಮಾಡುತ್ತಿರುವ ಆದರ್ಶ ಯುವಕ ಅವಿನಾಶ್ ಜಿ ಶೆಟ್ಟಿಯವರು ಭಾಜನರಾಗಿರುತ್ತಾರೆ..
ಸಾಧನಶ್ರೀ ಪ್ರಶಸ್ತಿಯನ್ನು ವಲಯ ಅಧ್ಯಕ್ಷರು ಜೆಸಿಐ ಸೆನೆಟರ್ ಅಭಿಲಾಶ್ ಬಿಎ ಅವರು ಗಣ್ಯರ ಸಮ್ಮುಖದಲ್ಲಿ ಅವಿನಾಶ್ ಶೆಟ್ಟಿಯವರಿಗೆ ನೀಡಿ ಗೌರವಿಸಿದರು.
ಹಾಗೂ ವ್ಯವಹಾರ ವಿಭಾಗದಲ್ಲಿ ಜೇಸಿಐ ಕಾರ್ಕಳಕ್ಕೆ ವಿನ್ನರ್ ಪ್ರಶಸ್ತಿಯೊಂದಿಗೆ ಹಲವಾರು ಮನ್ನಣೆಗಳು ದೊರಕಿದೆ.
ಈ ಸಂಧರ್ಭದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಎಸ್ ಜೈನ್, ವಲಯ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರು ವಿಘ್ನೇಶ್ ಪ್ರಸಾದ್, ಹಾಗೂ ಸುಶಾಂತ್ ಶೆಟ್ಟಿ , ಪೂರ್ವ ವಲಯ ಅಧ್ಯಕ್ಷ ಗಿರೀಶ್ ಎಸ್ ಪಿ, ವ್ಯವಹಾರ ವಿಭಾಗದ ನಿರ್ದೇಶಕರು ಅಶೋಕ್ ಗುಂಡಿಯಲ್ಕೆ , ಜೇಸಿಐ ಮಡಂತ್ಯಾರು ಘಟಕ ಅಧ್ಯಕ್ಷೆ ಅಮಿತಾ ಅಶೋಕ್ ಉಪಸ್ಥಿತರಿದ್ದರು