
ಜೆಸಿಐ ಭಾರತ ಆಯೋಜನೆ ಮಾಡುತ್ತಿರುವ ನ್ಯಾಷನಲ್ ಪಬ್ಲಿಕ್ ಸ್ಪೀಕಿಂಗ್ ಸ್ಪರ್ಧೆಗೆ ವಲಯ 15 ರಿಂದ ಏಕೈಕ ಜೇಸಿ ಸದಸ್ಯೆ ಜೇಸಿ ಕರ್ತವ್ಯ ಜೈನ್ ಇವರು ಆಯ್ಕೆ ಆಗಿರುತ್ತಾರೆ..ಆಯ್ಕೆಯಾದ ಆರು ಮಂದಿ ಸ್ಪರ್ಧಿಗಳಲ್ಲಿ ಇವರೂ ಕೂಡ ಓರ್ವರು.
ಪ್ರತಿಷ್ಠಿತ ಸಂಸ್ಥೆ ಜೇಸಿಐ ಕಾರ್ಕಳದ ಸಕ್ರಿಯ ಸದಸ್ಯೆ ಆಗಿರುವ ಇವರು, “Her voice her Power” ಎನ್ನುವ ವಿಷಯದ ಬಗ್ಗೆ ಮಾತನಾಡಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 27,28,29 ರಂದು ಚೆನ್ನೈನಲ್ಲಿ ನಡೆಯಲಿರುವ ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಜೇಸಿಐ ಕಾರ್ಕಳ ಹಾಗೂ ವಲಯ 15 ಅನ್ನು ಪ್ರತಿನಿಧಿಸಲಿದ್ದಾರೆ.
ಬಹುಮುಖ ಪ್ರತಿಭೆ ಆಗಿರುವ ಇವರು ವರ್ಧಮಾನ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಮತ್ತು ಶ್ರೀ ಕುಮಾರಯ್ಯ ಹೆಗ್ಡೆ ದಂಪತಿಗಳ ಪುತ್ರಿ.









