
ಜೆಸಿಐ ಭಾರತ ವಲಯ 15ರ ಲೇಡಿ ಜೇಸಿ ಹಾಗೂ ಜೂನಿಯರ್ ಜೆಸಿ ಸಮ್ಮೇಳನ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ಕುಂದಾಪುರದ ಸಹನ ಕನ್ವೆನ್ಷನ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಲೇಡಿ ಜೆಸಿ ವಿಭಾಗವು ಆತಿ ಹೆಚ್ಚು ಪ್ರಶಸ್ತಿಯೊಂದಿಗೆ ಟಾಪ್ 1 ಲೇಡಿ ಜೆಸಿ Oustanding ಪ್ರಶಸ್ತಿಯನ್ನು ತನ್ನದಾಗಿಸಿದೆ ಮತ್ತು ಜೂನಿಯರ್ ಜೆಸಿ ವಿಭಾಗದಲ್ಲಿ ಕೆಲವು ಪ್ರಶಸ್ತಿ ಮನ್ನಣೆಗಳು ದೊರಕಿದೆ.
ಜೆಸಿಐ ಭಾರತ ವಲಯ 15ರ ಲೇಡಿ ಜೆಸಿ, ಮಹಿಳೆಯರಿಗಾಗಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ, ಪ್ರಾಯಸ್ ಡೇ, ಕಾರ್ಯಕ್ರಮವು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ..
ಹಾಗು ಈ ಮಹಿಳಾ ಜೆಸಿ ಸಮ್ಮೇಳನ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿದ ಪ್ಯಾಷನ್ ಸ್ಪರ್ಧೆಯಲ್ಲಿ ಜೆಸಿಐ ಕಾರ್ಕಳ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ
ಪ್ರಶಸ್ತಿ ಹಾಗೂ ಮನ್ನಣೆಗಳನ್ನು ವಲಯ ಅಧ್ಯಕ್ಷರಾದ ಜೆಸಿಐ ಸೆನೆಟರ್ ಅಭಿಲಾಶ್ ಬಿಎ ಇವರು ಲೇಡಿ ಜೇಸಿ ನಿರ್ದೇಶಕರಾದ ಜಯಶ್ರೀ ಮಿತ್ರ ಅವರ ಸಮ್ಮುಖದಲ್ಲಿ ಜೆಸಿಐ ಕಾರ್ಕಳ ಲೇಡಿ ಜೆಸಿ ನಿರ್ದೇಶಕಿ ಶಾಹಿನಾ ರಿಜ್ವಾನ್ ಖಾನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಜೆಸಿ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್ ಮತ್ತು ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರು ವಿಗ್ನೇಶ್ ಪ್ರಸಾದ್ ಜೆಸಿಐ ಕಾರ್ಕಳದ ಪೂರ್ವ ಅಧ್ಯಕ್ಷರು ಸಮದ್ ಖಾನ್, ದಿವ್ಯಾಸ್ಮಿತಾ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು