ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮಾಡಿ : ಜೆಸಿಐ ಅಂತರಾಷ್ಟ್ರೀಯ ತರಬೇತುದಾರರು ರಾಜೇಂದ್ರ ಭಟ್

ಜೆಸಿಐ ಕಾರ್ಕಳ ವತಿಯಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆ ರೆಂಜಾಳ 10ನೇ ತರಗತಿಯ ವಿದ್ಯಾರ್ಥಿಗಳಿಗೆ “How to face Exam” ಮಾಹಿತಿ ಕಾರ್ಯಗಾರ ನಡೆಯಿತು ಸುಮಾರು ಮೂರು ಗಂಟೆಗಳ ಕಾಲ ಮಕ್ಕಳಿಗೆ ಮಾಹಿತಿ ಹಾಗು ತರಬೇತಿಯೊಂದಿಗೆ ಪರೀಕ್ಷೆಯನ್ನು ಎದುರಿಸಿ ಸ್ಮಾರ್ಟ್ ಆಗಿ ಯೋಚಿಸುವುದು ಹೇಗೆ , ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುವುದು ಹೇಗೆ ಹಾಗೆ ಹಲವಾರು ನೈಜ ಕಥೆಯೊಂದಿಗೆ ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಹೇಗೆ ವರ್ಕ್ ಆಗುತ್ತದೆ ಎಂದು ಜೆಸಿಐ ಅಂತರಾಷ್ಟ್ರೀಯ ತರಬೇತುದಾರರು ರಾಜೇಂದ್ರ ಭಟ್ ಇವರು ಮಾಹಿತಿಯನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹಿಸಿ ಹುರಿದುಂಬಿಸಿದರು .

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ, ಜೆಸಿಐ ಕಾರ್ಕಳ ದ ಅಧ್ಯಕ್ಷರು ಜೆಸಿ ಶ್ವೇತಾ ಎಸ್ ಜೈನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶೀತಲ್ ಕುಮಾರ್ ಜೈನ್ , ಶಾಲಾ ಹಿತೈಷಿ ಹಾಗೂ ಮಾರ್ಗದರ್ಶಕರಾದ ರಾಜೇಶ್ ರೆಂಜಾಳ,ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಮಕ್ಕಳ ಪ್ರಾರ್ಥನೆಯೊಂದಿಗೆ , ಶಾಲಾ ಮುಖ್ಯ ಶಿಕ್ಷಕಿ ಸ್ವರ್ಣ ಲತಾ ಅವರು ಸ್ವಾಗತಿಸಿ ಜೆಸಿಐ ಕಾರ್ಕಳದ ಅಧ್ಯಕ್ಷರು ಜೇಸಿ ಶ್ವೇತಾ ಎಸ್ ಜೈನ್ ವಂದಿಸಿದರು.