ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ, ಬಾಲಾಪರಾಧ ಮಾಹಿತಿ ಕಾರ್ಯಾಗಾರ

ಜೆಸಿಐ ಕಾರ್ಕಳ ರೂರಲ್ ಜೂನಿಯರ್ ಜೆಸಿ ವಿಭಾಗದ ವತಿಯಿಂದ ,ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆ ಹಿರಿಯಂಗಡಿ, ಕಾರ್ಕಳದಲ್ಲಿ ದಿನಾಂಕ 24.01.2026 ನೇ ಶನಿವಾರ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಬಾಲಾಪರಾಧ ವಿಷಯದ ಬಗ್ಗೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಇವರು ಉಪಯುಕ್ತ ಮಾಹಿತಿ ನೀಡಿದರು.
ದುಶ್ಚಟಗಳಿಂದಾಗುವ ವ್ಯತಿರಿಕ್ತ ಪರಿಣಾಮ,ಶಿಕ್ಷೆ,ಅನಾರೋಗ್ಯ, ನಿಂದನೆ,ಮಾನಸಿಕ ಅಶಾಂತಿ ಇತ್ಯಾದಿ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿ ವ್ಯಸನ ಮುಕ್ತರಾಗಿ ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು.ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಪಡಿವಾಳ್ ಜೇಸಿಐ ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷೆ ಶ್ರೀಮತಿ ವೀಣಾ ರಾಜೇಶ್ ಹಾಗೂ ಜೂನಿಯರ್ ಜೆಸಿ ಅಧ್ಯಕ್ಷೆ ದಿಯಾ ಭಂಡಾರಿ ಉಪಸ್ಥಿತರಿದ್ದರು. ಶಿಕ್ಷಕಿ ಸುಮತಿ ಬಿ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು ಶಿಕ್ಷಕಿ ಕುಮಾರಿ ಸ್ವಾತಿ ವಂದಿಸಿದರು.



















