
ಜೂ.3, ಮಂಗಳವಾರದಂದು ಬೇಲಾಡಿ ಕಾಂತವರ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ದೃಢಕಲಶೋತ್ಸವ ನಡೆಯಲಿದೆ.
ಬೆಳಗ್ಗೆ ಗಂಟೆ 9ರಿಂದ 1:30ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಬಳಿಕ ದೃಢಕಲಶೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಊರ-ಪರವೂರ ಸಮಸ್ತ ಭಕ್ತರು ಭಾಗವಹಿಸಿ ಶ್ರೀ ಬ್ರಹ್ಮ ಬೈದರ್ಕಳ ಪರಿವಾರ ಶಕ್ತಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯು ಆಹ್ವಾನಿಸಿದೆ.
















































