
ಹಲಸು – ಮಾವು – ಕೃಷಿ – ಕರಕುಶಲ, ಸಾಂಪ್ರದಾಯಿಕ ಬೆಳೆ ಮತ್ತು ತಿಂಡಿ ತಿನಿಸುಗಳನ್ನು ಈ ಬಿರುಸಿನ ಮಳೆಗಾಲದಲ್ಲೂ ಉಡುಪಿಯ ಜನರಿಗೆ ಒದಗಿಸುವ ಸಲುವಾಗಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳವು ದಿನಾಂಕ: 4, 5 ಮತ್ತು 6 ರಂದು ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ – ಜಿಲೇಬಿ – ಸಾಟ್ – ಕಡುಬು – ಮುಳ್ಕ – ಕೇಸರಿ ಬಾತ್ – ಪಾಯಸ – ಹಪ್ಪಳ – ಮಾಂಬುಳ – ಸೆಂಡಿಗೆ – ಚಿಪ್ಸ್ – ಜಾಮ್ – ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಹಲಸಿನ ಐಸ್ ಕ್ರೀಮ್ – ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಪತ್ರೊಡೆ, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಗೋಳಿ ಸೋಡಾ, ಕೈಮಗ್ಗ – ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ : 9844993565, 9663349808 ಸಂಪರ್ಕಿಸಬಹುದು.






















































