
ಜಿಲ್ಲಾ ಮಟ್ಟದ ಥ್ರೋ -ಬಾಲ್ ಸ್ಪರ್ಧೆಯಲ್ಲಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕರು ಪ್ರಥಮ ಬಾಲಕಿಯರು ದ್ವಿತೀಯ ಶಿಕ್ಷಣಾದಿಕಾರಿ ಕಛೇರಿ ಬೈಂದೂರು ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರ್ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ, 14/ 17 ರ ವಯೋಮಿತಿಯ ಜಿಲ್ಲಾ ಮಟ್ಟದ ಬಾಲಕ- ಬಾಲಕಿಯರ ಥ್ರೋ-ಬಾಲ್ ಪಂದ್ಯಾಟವು ದಿನಾಂಕ 15-11-25 ರಂದು ನಡೆದಿದ್ದು… ಈ ಪಂದ್ಯಾಟದಲ್ಲಿ, ಚರ್ಚ್ ಆಂಗ್ಲ ಮಾಧ್ಯಮ ಶಾಲೆ ಅಜೆಕಾರು ಇಲ್ಲಿಯ ಬಾಲಕರ ತಂಡ ಪ್ರಥಮ ಸ್ಥಾನಿ ಯಾಗಿ ಮೈಸೂರ್ ನಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತದೆ.- ಬಾಲಕಿಯರ ತಂಡ ದ್ವಿತಿಯ ಸ್ಥಾನ ಪಡೆದಿರುತ್ತದೆ .
ಮುಖ್ಯ ಶಿಕ್ಷಕರು ಮಾತನಾಡುತ್ತಾ, ಮಕ್ಕಳಿಗೆ…, ಪಾಠಶಾಲೆಯ ಪುಸ್ತಕಗಳು ಮನಸ್ಸನ್ನು ಬಲಪಡಿಸುತ್ತವೆ, ಮೈದಾನದ ಆಟಗಳು ಮನೋಬಲವನ್ನು ಬೆಳೆಸುತ್ತವೆ.”
“ಶಿಕ್ಷಣವಿಲ್ಲದೆ ಜೀವನ ಅಪೂರ್ಣ; ಕ್ರೀಡೆಯಿಲ್ಲದೆ ಆರೋಗ್ಯ ಅಪೂರ್ಣ.”
ಉತ್ತಮ ಶಿಕ್ಷಣ ನೀಡುದರೊಂದಿಗೆ ಈ ಶಿಕ್ಷಣ ಸಂಸ್ಥೆ, ಕ್ರೀಡೆಗೂ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ ಎಂದು ಎಲ್ಲರನ್ನು ಹುರಿದುಂಬಿಸಿದರು.
ವಿಜಯಶಾಲಿ ತಂಡಕ್ಕೆ ಚರ್ಚ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ವಂದನೀಯ ಗುರು ಹೆನ್ರಿ ಮಸ್ಕರೇನಸ್, ಮುಖ್ಯ ಶಿಕ್ಷಕಿ ಶ್ರೀಮತಿ ರೇಷ್ಮಾ ಶೀಲಾ ರೋಡ್ರಿಗಸ್, ದೈಹಿಕ ಶಿಕ್ಷಣ ಶಿಕ್ಷಕರಾದ, ಶ್ರೀ. ಸುಶಾಂತ್, ತರಬೇತುದಾರರದ ಶ್ರೀ ಝುನೈದ್ ಹಾಗೂ ಹಳೇವಿದ್ಯಾರ್ಥಿ ಪ್ರಣೀತ್, ಪೋಷಕರಾದ, ಶ್ರೀ ರಾಮಪ್ಪ, ಶ್ರೀಮತಿ ರೇಷ್ಮಾ, ಶ್ರೀ ನಾಜಿರ್ ಶಾಹ್ ಕ್ರೀಡಾಳು ಗಳೊಂದಿಗಿದ್ದು ಸಹಕರಿಸಿದ್ದು, ಈ ವಿಜಯಕ್ಕೆ ಬಾಗಿಯಾದ ಎಲ್ಲರಿಗೂ…ಶಿಕ್ಷಕ -ಶಿಕ್ಷಕೇತರ ವರ್ಗದವರು, ಪೋಷಕ ಪ್ರತಿನಿಧಿ ಹಾಗೂ ಪೋಷಕವರ್ಗದವರೆಲ್ಲರೂ ಶುಭ ಹಾರೈಸಿರುತ್ತಾರೆ.






