
ರೋಟರಿ ಕ್ಲಬ್ ಆಫ್ ಕಾರ್ಕಳ ದ ವತಿಯಿಂದ ಜಿಲ್ಲಾ ಗವರ್ನರ್ ರೊಟೇರಿಯನ್ ಎಂ.ಜೆ.ಡಿ, ಸಿ.ಎ ದೇವ್ ಆನಂದ್ & ಪಸ್ಟ್ ಲೇಡಿ ಶ್ರೀಮತಿ ರೇಖಾ ದೇವ್ ಆನಂದ್ ದಂಪತಿಗಳು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ರೊ. ಚೇತನಾ ಪ್ರಭು ಇವರ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಿ ವಿಶೇಷ ಭೋಜನದ ವ್ಯವಸ್ಥೆ ಹಾಗೂ ಯೋಗೀಶ್ ಪ್ರಭು ಇವರು ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೊ. ಅನಿಲ್ ಡೇಸಾ ಝೋನಲ್ ಲೆಫ್ಟಿನಂಟ್ ರೊ. ಪಿ ಹೆಚ್ ಎಫ್ ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ರೊ.ಇಕ್ಬಾಲ್ ಅಹಮ್ಮದ್, ಸೆಕ್ರೆಟರಿ ರೊ. ಗಣೇಶ್ ಸಾಲ್ಯಾನ್, ಫಾಸ್ಟ್ ಎ ಜಿ ಶೈಲೇಂದ್ರ ರಾವ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶೇಷ ಶಿಕ್ಷಕಿ ಶ್ರೀಮತಿ ಶ್ರೀನಿಧಿ ಅಶೋಕ್ ವಂದಿಸಿದರು.










