
ಜೈಪುರ ಫೆಬ್ರವರಿ 19: ಭೀಕರ ದುರಂತವೊಂದರಲ್ಲಿ 270 ಕೆಜಿ ತೂಕದ ಪವರ್ ಲಿಪ್ಟಿಂಗ್ ಅಭ್ಯಾಸ ಮಾಡುವ ವೇಳೆ ಆಯತಪ್ಪಿ ಕುತ್ತಿಗೆ ಮೇಲೆ ಬಿದ್ದು, ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮಹಿಳಾ ಪವರ್ ಲಿಪ್ಪರ್ ಸಾವನಪ್ಪಿದ ಘಟನೆ ನಡೆದಿದೆ.
ಮಹಿಳಾ ಪವರ್ ಲಿಪ್ಟರ್ ಯಾಷ್ಟಿಕಾ ಆಚಾರ್ಯ (17) ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ 270 ಕೆ.ಜಿ ತೂಕದ ರಾಡ್ ಬಿದ್ದು ಕುತ್ತಿಗೆ ಮುರಿದಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ನಯಾ ಶಹರ್ ಎಸ್‌ಎಚ್‌ಒ ವಿಕ್ರಮ್ ತಿವಾರಿ ಹೇಳಿದ್ದಾರೆ. ಯಾಷ್ಟಿಕಾ ಜಿಮ್‌ನಲ್ಲಿ ಭಾರ ಎತ್ತುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದುರಂತದಲ್ಲಿ ತರಬೇತುದಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿವಾರಿ ವಿವರಿಸಿದ್ದಾರೆ.