
ಜಾಲಿ ಬಾಯ್ಸ್ ಬಜಗೋಳಿ ನೇತೃತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಾರು ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂಶೈಕ್ಷಣಿಕ ಪರಿಕರಗಳ ವಿತರಣೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವರ್ಮ ಅಜ್ರಿ ಯವರು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಜ್ವಾಲಿ ಬಾಯ್ಸ್ ತಂಡದ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ಯವರು,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೋಪಾಲ ಪೂಜಾರಿ,ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ರಾಜೇಂದ್ರ ಜೈನ್, ಸುರೇಂದ್ರ ಜೈನ್, ಸಮಾಜ ಸೇವಕರಾದ ದಿವಾಕರ್ ಸೇರ್ವೆಗಾರ್ ,ಗ್ರಾಮ ಪಂಚಾಯತ್ ಸದಸ್ಯರಾದ ಶಿವಪ್ರಸಾದ್,ಲಕ್ಷ್ಮೀ,ಮುಖ್ಯೋಪಾಧ್ಯಾಯ ರಾದ ಜಯ ಕೆ.ಮೊಯ್ಲಿ ,ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್,ಜ್ವಾಲಿ ಬಾಯ್ಸ್ ತಂಡದ ಸದಸ್ಯರು, ಎಸ್.ಡಿ.ಎಂ.ಸಿ.ಸದಸ್ಯರು, ಶಿಕ್ಷಕಿಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.