31.9 C
Udupi
Monday, April 13, 2026
spot_img
spot_img
HomeBlogಜಾರಿಗೆ ಕಟ್ಟೆಯ ಕೊರಗಜ್ಜ ಮತ್ತು ಕೊರಗರ ಪಂಜುರ್ಲಿ ಕ್ಷೇತ್ರದಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

ಜಾರಿಗೆ ಕಟ್ಟೆಯ ಕೊರಗಜ್ಜ ಮತ್ತು ಕೊರಗರ ಪಂಜುರ್ಲಿ ಕ್ಷೇತ್ರದಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

ಏಪ್ರಿಲ್ 18 ಶನಿವಾರದಂದು ಜಾರಿಗೆ ಕಟ್ಟೆಯ ಕೊರಗಜ್ಜ ಮತ್ತು ಕೊರಗರ ಪಂಜುರ್ಲಿ ಕ್ಷೇತ್ರದಲ್ಲಿ ಸತ್ಯದೇವತೆ, ಪಿಲಿಚಾಮುಂಡಿ, ಮಂತ್ರ ದೇವತೆ, ವರ್ತಪಂಜುರ್ಲಿ, ಕೊರಗರ ಪಂಜುರ್ಲಿ, ಕೊರತಿ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ.

ಏಪ್ರಿಲ್ 17ರಂದು ಬೆಳಗ್ಗೆ 6 ಗಂಟೆಗೆ ನವಕ ಪ್ರಧಾನ ಹೋಮ ಹಾಗೂ ಗಣ ಹೋಮ ನಡೆಯಲಿದ್ದು 18ರಂದು ಬೆಳಗ್ಗೆ 9:00ಕ್ಕೆ ಭಂಡಾರ ಇಳಿದು ಮಧ್ಯಾಹ್ನ 12:30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2:30 ರಿಂದ ಸತ್ಯ ದೇವತೆ ನೇಮ, 4:30ಕ್ಕೆ ಪಿಲಿಚಾಮುಂಡಿ ನೇಮ, 06:30ಕ್ಕೆ ಮಂತ್ರ ದೇವತೆ, ವರ್ತೆ ಪಂಜುರ್ಲಿ ನೇಮ, ರಾತ್ರಿ 08:30ಕ್ಕೆ ಕೊರಗರ ಪಂಜುರ್ಲಿ ನೇಮ, 11:00 ಗಂಟೆಗೆ ಕೊರತಿ ದೈವದ ನೇಮ ಹಾಗೂ 12:00 ಗಂಟೆಗೆ ಕೊರಗಜ್ಜ ದೈವದ ನೇಮ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕು ಎಂದು ಸರ್ವರಿಗೂ ಆಹ್ವಾನಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page