
ಧಾರವಾಡ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಮಲೆನಾಡು ಬಯಲುಸೀಮೆಯಂತಾಗುತ್ತದೆ, ಬಯಲುಸೀಮೆ ಮಲೆನಾಡಿನಂತಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮಾತನಾಡಿದ ಶ್ರೀಗಳು, ಸಿದ್ಧರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಇಲ್ಲ. ಉಳಿದದ್ದನ್ನು ಸಂಕ್ರಾಂತಿಯ ನಂತರ ನೋಡಿ ಹೇಳಬೇಕು. ಈ ಹಿಂದೆ ತಾವು ಭವಿಷ್ಯ ನುಡಿದಂತೆ ಬಯಲುಸೀಮೆಯಲ್ಲಿ ಮಳೆಯಾಗಿದೆ. ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಬಯಲು ಸೀಮೆ ಮಲೆನಾಡು ಮಳೆ ಎಂದು ಹೇಳಿದ್ದೆ. ಮಲೆನಾಡು ಬಯಲು ಸೀಮೆ ಆಗುತ್ತೆ ಎಂದಿದ್ದೆ. ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂದು ಹೇಳಿದರು.
ರಾಜ್ಯದ ಜಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯದ ಜನರು ದಡ್ಡರಲ್ಲ, ಬಹಳ ಬುದ್ಧಿವಂತರಿದ್ದಾರೆ, ತಿಳುವಳಿಕೆಯುಳ್ಳವರಿದ್ದಾರೆ .ಜನರಿಗೆ ಯಾವುದು ಬೇಕೋ ಅದನ್ನು ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.



















