
ಕಾರ್ಕಳದ ಜಾಗೃತಿ ,ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ,ಸಾಹಿತಿ ಸದಸ್ಯೆ ಜ್ಯೋತಿ ಗುರುಪ್ರಸಾದ್ ಅವರ ಮನೆ ‘ಕಾವೇರಿ’ಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಾಗೃತಿಯ ಅಧ್ಯಕ್ಷೆ ಶ್ಯಾಮಲಾ ಗೋಪೀನಾಥ್ ಅವರು ಸದಸ್ಯೆಯರ ಸಾಧನೆಗಳ ನ್ನು ಗುರುತಿಸುತ್ತಾ ಪ್ರಾಸ್ತಾವಿಕ ಮಾತುಗಳನ್ನು ಆಡಿ, ಸ್ವಾಗತಿಸಿದರು.
ಅನಂತರ ಶ್ರೀಮತಿ ಜ್ಯೋತಿಯವರು ಸದಸ್ಯೆಯರಿಗೆ ಪುಸ್ತಕ ಬಾಗಿನವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಉದ್ಘಾಟಿಸಲಾಯಿತು. ಜ್ಯೋತಿ ಗುರುಪ್ರಸಾದ್ ಅವರು ಆಶಯ ಭಾಷಣ ಮಾಡುತ್ತಾ,”ಜಾಗೃತಿ ಸಂಘಟನೆ ಮಹಿಳಾಪರ ಧ್ವನಿಗೆ ಸೇತುವಾಗಿ,ಅವಳ ಗಟ್ಟಿ ವ್ಯಕ್ತಿತ್ವವನ್ನು ಪೋಷಿಸುವ ಚಾಲಕ ಶಕ್ತಿಯಾಗಿ ಬೆಳೆಯಲಿ “ಎಂದು ಹಾರೈಸಿದರು.
ಅನುಪಮಾ ಚಿಪ್ಳೂಂಕರ್ ಅವರು ‘ಸಬಲ ಮಹಿಳೆ’ ಎಂಬ ವಿಷಯದ ಕುರಿತು ಪ್ರಬಂಧ ಮಂಡನೆ ಮಾಡುತ್ತಾ ‘ ಮಹಿಳೆಯರನ್ನು ಸಬಲರಾಗಿಸುವುದು ಕೇವಲ ಸರಕಾರದ ಕೆಲಸವಲ್ಲ.ಅದು ಸಾಮಾಜಿಕ ಹೊಣೆಗಾರಿಕೆ. ಸ್ವತಃ ಮಹಿಳೆಯರೆ ಈ ಬಗ್ಗೆ ಜಾಗೃತರಾಗಬೇಕಾಗಿದೆ’ ಅಂದರು.
ಡಾ.ಮಾಲತಿ ಪೈಯವರು ಚಿ. ನ. ಮಂಗಳಾ ಅವರ ಒಂದು ಕವಿತೆಯನ್ನು ವಾಚಿಸಿ ಅದನ್ನು ವಿಶ್ಲೇಷಿಸುತ್ತಾ “ಹೆಣ್ಣು ಎಷ್ಟೇ ಕಷ್ಟ ಬಂದರೂ ಎದೆಗೆಡದೆ ತನ್ನ ಅಂತಃಸತ್ವವನ್ನು ಕೈ ಬಿಡದೆ ತನ್ನನ್ನು ತಾನು ಕಂಡುಕೊಳ್ಳ ಬೇಕಾಗಿದೆ.ಭಾಷಣಗಳಲ್ಲಿ ಹಾಗೂ ಲೇಖನಗಳಲ್ಲಿ ಮಾತ್ರ ಹೆಣ್ಣನ್ನು ಗೌರವಿಸುವ ಸೋಗಲಾಡಿತನವನ್ನು ಅವಳು ಗುರುತಿಸಿ,ಎದುರಿಸ ಬೇಕಾಗಿದೆ” ಎಂದರು.ಶ್ರೀಮತಿ ವಸುಧಾ ಅವರು ಸಕಾಲಿವಾದ ಸ್ವರಚಿತ ಕಥೆಯನ್ನು ವಾಚಿಸಿ,ಹೆಣ್ಣು ತನ್ನನ್ನು ತಾನು ನಿರೂಪಿಸುವ ಹೋರಾಟವನ್ನು ಬಣ್ಣಿಸಿ,ಸಂಭ್ರಮಿಸಿದರು ಕೊನೆಯಲ್ಲಿ ಸಾಧಕ ಸದಸ್ಯೆಯರಾದ ಜ್ಯೋತಿ ಗುರುಪ್ರಸಾದ್,ಸಾವಿತ್ರಿ ಮನೋಹರ್ ಹಾಗು ಮಿತ್ರಪ್ರಭಾ ಹೆಗ್ಡೆ ಇವರನ್ನು ಶಾಲು ಹೊದಿಸಿ,ಪುಸ್ತಕ ನೀಡಿ ಸನ್ಮಾನಿಸಲಾಯಿತು.ಗಾಯತ್ರಿ ವಿಜಯೇಂದ್ರ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಡಾ.ಸುಮತಿ ಪಿ ನಿರೂಪಿಸಿದರು.ಮಾಲತಿ ವಸಂತರಾಜ್ ವಂದಿಸಿದರು.






