ಹಿರಿಯ ಸಾಹಿತಿ ಭೈರಪ್ಪನವರ ಕಾದಂಬರಿಯ ಕುರಿತು ವಿಚಾರಗೋಷ್ಠಿ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯು ತಿಂಗಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮನಗಲಿದ ಹಿರಿಯ ಸಾಹಿತಿ ಭೈರಪ್ಪರವರ ಕಾದಂಬರಿಗಳ ಕುರಿತು ವಿಚಾರ ಗೋಷ್ಠಿಯನ್ನು ಸಾವಿತ್ರಿ ಮನೋಹರ್ ರವರ ನಿವಾಸ ವಾಸುಕಿಯಲ್ಲಿ ಹಮ್ಮಿಕೊಳ್ಳಲಾಯಿತು.
ಭೈರಪ್ಪನವರ ಪರ್ವ ಕಾದಂಬರಿಯ ಕುರಿತು ಸಾವಿತ್ರಿ ಮನೋಹರ್, ಮಂದ್ರ ಕಾದಂಬರಿಯ ಕುರಿತು ಡಾ. ಸುಮತಿ ಕೆ., ಭೈರಪ್ಪನವರ ಕಾದಂಬರಿಯಲ್ಲಿ ಚರ್ಚಿತ ಸ್ತ್ರೀ ಪಾತ್ರಗಳ ವಿಮರ್ಶೆಯನ್ನು ಡಾ.ಮಾಲತಿ. ಜಿ. ಪೈ ಇವರು ಮಂಡಿಸಿದರು. ಓಂಕಾರ್ ಎ.ರಾವ್ ಪ್ರಾರ್ಥಿಸಿ ಅಧ್ಯಕ್ಷೆ ಪ್ರೊ.ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಸುಲೋಚನ ಬಿ.ವಿ.ವಂದಿಸಿದರು. ಶೈಲಜಾ ಹೆಗ್ಡೆ ನಿರೂಪಿಸಿದರು.





