ಉಡುಪಿಗೆ ಆಗಮಿಸಿದ,ಕುಂದಾಪುರದ ಯೋಧ ಅನುಪ್ ಪಾರ್ಥಿವ ಶರೀರ
ಸಂಸದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ ಅಂತಿಮ ನಮನ

ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಐವರು ಯೋಧರು ಮೃತಪಟ್ಟಿದ್ದು, ಕರ್ನಾಟಕದ ಯೋಧ ಅನುಪ್ ಪೂಜಾರಿ ಕೂಡ ಓರ್ವರಾಗಿದ್ದಾರೆ.
ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ, ಸಂಭವಿಸಿದ ಅಪಘಾತದಲ್ಲಿ, ಮೃತಪಟ್ಟ , ಕರ್ನಾಟಕದ ಕುಂದಾಪುರ ತಾಲೂಕಿನ ಬಿಜಾಡಿಯವರಾದ ಯೋಧ ಅನುಪ್ ಪೂಜಾರಿಯವರ ಮೃತದೇಹವು ಉಡುಪಿಗೆ ಆಗಮಿಸಿದ್ದು, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಂತಿಮ ನಮನ ಸಲ್ಲಿಸಿದರು.
ಬಿಜಾಡಿಯ ಪಡುಸರಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ನಡೆಸಿದ್ದು ಇಂದು ಸಂಜೆಯ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.



















