ರಾಜ್ಯದ ನಾನಾ ಕಡೆಗಳಲ್ಲಿ ಎಲ್ಲಾ ಸಮಾಜದ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಗಾಗಿ ತೆರಳಿದ ವಿದ್ಯಾರ್ಥಿಗಳಲ್ಲಿ, ಜನಿವಾರದಾರಿ ವಿದ್ಯಾರ್ಥಿಗೆ ಜನಿವಾರ ಕತ್ತರಿಸಿದ ಪ್ರಕರಣ ನಡೆದಿರುವುದು ತುಂಬಾ ಖೇದಕರವಾಗಿದೆ. ತಂದೆ - ತಾಯಿಯವರು ತಮ್ಮ ಮಕ್ಕಳಿಗೆ ತಮ್ಮ ಸಂಪ್ರದಾಯದಂತೆ ಬ್ರಹ್ಮೋಪದೇಶ ಮಾಡುವುದು ಪೋಷಕರ ಕರ್ತವ್ಯ.ಉಪನಯನ, ಜನಿವಾರ ಧಾರಣೆ ತಲಾ ತಲಾಂತರದಿಂದ ಬಂದ ಸಂಪ್ರದಾಯ, ವರ್ಷಗಳಲ್ಲಿ ಉಪಕರ್ಮ ದಿನ ಜನಿವಾರ ತೊಡುವ ಸಂಪ್ರದಾಯ ಈಗಲೂ ಇದೆ. ಇದರಲ್ಲಿ ಯಾವುದೇ ಸರಕಾರದ ಅಧಿಕಾರಿಗಳಿಗೆ ಜನಿವಾರವನ್ನು ಧರಿಸಬಾರದು ಅಥವಾ ಕತ್ತರಿಸಿ ಬಿಸಾಡುವ ಹಕ್ಕು ಯಾರಿಗೂ ಇಲ್ಲ. ಜನಿವಾರ ತೆಗಿಸಿದ ಅಥವಾ ಕತ್ತರಿಸಿದ ಅಧಿಕಾರಿಗಳಿಗೆ ಯಾರು ಆದೇಶ ಮಾಡಿದರು ಎಂದು ಕೂಲಂಕುಶ ತನಿಖೆ ಆಗಬೇಕು, ಮುಂದೆ ಇಂತಹ ಘಟನೆಗಳು ನಡೆದರೆ ಆ ಕರ್ತವ್ಯದಲ್ಲಿ ಇರುವ ಅಧಿಕಾರಿಯನ್ನು ಈ ಸಮಾಜದ ಮುಂದೆ ನೀಡಿದರೆ ನಾವು ತಕ್ಕ ಪಾಠ ಕಲಿಸಲು ಸಿದ್ದರಿದ್ದೇವೆ, ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಕವಡೆಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.