
ಕರ್ನಾಟಕದಲ್ಲಿ “ಮುಖ್ಯಮಂತ್ರಿ ಕುರ್ಚಿ ಯುದ್ಧ” ಮುಂದುವರೆದಿದ್ದು ಎರಡೂವರೆ ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಬಹುದೊಡ್ಡ ಪಾಲು ಹೊತ್ತ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಮಾತುಕೊಟ್ಟ ಸಿಎಂ ಸಿದ್ದರಾಮಯ್ಯ ಈಗ ಯು ಟರ್ನ್ ಹೊಡೆದಿರುವ ಹಿನ್ನೆಲೆಯಲ್ಲಿ, ಪಕ್ಷದ ಒಳಗೆ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಈಗಾಗಲೇ ಹಲವು ಜ್ಯೋತಿಷಿಗಳು ಡಿ.ಕೆ.ಶಿವಕುಮಾರ್ ಅವರ ಭವಿಷ್ಯವನ್ನು ನುಡಿದಿದ್ದು ಇದೀಗ ರಾಜಕೀಯ ವಲಯದಲ್ಲಿ ಪ್ರಭಾವಿ ಎಂದು ಎನ್ನಿಸಿಕೊಂಡಿರುವ ದ್ವಾರಕಾನಾಥ್ ಅವರು ಶಿವಕುಮಾರ್ ಅವರ ಸಿಎಂ ಖುರ್ಚಿಯ ಭವಿಷ್ಯವನ್ನು ನುಡಿದಿದ್ದಾರೆ. ಅವರು ಹೇಳಿರುವ ಪ್ರಕಾರ ಜನವರಿ 5 ರಿಂದ ಜನವರಿ 30ರ ಒಳಗೆ ಡಿಕೆಶಿ ಅವರ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮಾಡಿ ಪೂಜೆ ಪುನಸ್ಕಾರ ಮಾಡುತ್ತಿದ್ದು ಒಂದು ವೇಳೆ ಸಿದ್ದರಾಮಯ್ಯನವರು ಸಿಎಂ ಖುರ್ಚಿಯಿಂದ ಕೆಳಕ್ಕೆ ಇಳಿದರೂ, ಆ ಖುರ್ಚಿ ಡಿ.ಕೆ.ಶಿವಕುಮಾರ್ ಅವರಿಗೇ ಸಿಗುತ್ತದೆ ಎನ್ನುವ ಭರವಸೆಯೂ ಸದ್ಯಕ್ಕಿಲ್ಲ.
ರಾಜಕೀಯ ವಲಯದಲ್ಲಿ ದ್ವಾರಕಾನಾಥ್ ಅವರು ಪವರ್‌ಫುಲ್ ಜ್ಯೋತಿಷಿ ಎಂದು ಎನ್ನಿಸಿಕೊಂಡಿದ್ದು ಡಿ.ಕೆ.ಶಿವಕುಮಾರ್ ಅವರು ಇಂದು ಈ ಮಟ್ಟಿಗೆ ಬರುವಲ್ಲಿ ಅದರ ಹಿಂದೆ ದ್ವಾರಕಾನಾಥ್ ಅವರ ಕೊಡುಗೆ ಅಪಾರವಾಗಿದೆ ಎನ್ನುವ ಮಾತಿದೆ. ರಾಜಕೀಯ ಪ್ರಭಾವಿಗಳು ಇವರ ಬಳಿಯೇ ಬಹಳ ವರ್ಷಗಳಿಂದಲೂ ಭವಿಷ್ಯ ಕೇಳುವುದು ಸಾಮಾನ್ಯ. ಹೀಗಾಗಿ ಜ್ಯೋತಿಷಿ ದ್ವಾರಕನಾಥ್ ನುಡಿದ ಭವಿಷ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.






